ಕೇಬಲ್ ಕಳ್ಳರ ಜಾಲ ಪತ್ತೆಗೆ ಆಗ್ರಹ

JLR ph2 Oct 20 kebal Kalavu
?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಜಗಳೂರು: ತಾಲೂಕಿನ ಅರಿಶಿನಗುಂಡಿ, ಲಿಂಗಣ್ಣನಹಳ್ಳಿ ಸೇರಿ ಸುತ್ತಮುತ್ತಲ ಜಮೀನುಗಳಲ್ಲಿ ರಾತ್ರೋ ರಾತ್ರಿ ಈವರೆಗೆ 30ಕ್ಕೂ ಹೆಚ್ಚು ಜಮೀನುಗಳಲ್ಲಿ ಕೇಬಲ್ ಕಳ್ಳತನವಾಗಿದ್ದು, ಬೇಸತ್ತ ರೈತರು ಪೊಲೀಸ್ ಠಾಣೆಗೆ ಧಾವಿಸಿ ಪ್ರಕರಣ ದಾಖಲಿಸಿ ಕಳ್ಳರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಕೇಬಲ್ ಕಳ್ಳತನ ಹೊಸದೇನಲ್ಲ. ಕಳೆದು ಎರಡುಮೂರು ವರ್ಷಗಳಿಂದ ಅಲ್ಲಲ್ಲಿ ನಡೆಯುತ್ತಿತ್ತು ಈ ಬಗ್ಗೆ ರೈತರು ತಲೆ ಕೆಡಿಸಿಕೊಂಡಿರಲಿಲ್ಲ. ಇತ್ತೀಚೆಗೆ ಜಮೀನುಗಳನ್ನೇ ಟಾರ್ಗೆಟ್ ಮಾಡಿಕೊಂಡಿರುವ ಕಳ್ಳರು ರಾತ್ರೋರಾತ್ರಿ ಹತ್ತಾರು ಕಡೆ ಮೋಟರ್ ಪಂಪ್​ಸೆಟ್​ಗಳಿಗೆ ಅಳವಡಿಸಿರುವ ಕೇಬಲ್ ಕತ್ತರಿಸಿ ಕೊಂಡು ಪರಾರಿಯಾಗುತ್ತಿದ್ದಾರೆ.

ಅರಿಶಿನಗುಂಡಿ, ಲಿಂಗಣ್ಣನಹಳ್ಳಿ, ತೋರಣಗಟ್ಟೆ, ಜಮ್ಮಾಪುರ, ಕಟ್ಟಿಗೆಹಳ್ಳಿ, ಬಿದರಕೆರೆ ಸುತ್ತ ಮುತ್ತ ಅಡಕೆ ಬೆಳೆಯಲಾಗುತ್ತಿದ್ದು ಸಾವಿರಾರು ಕೊಳವೆಬಾವಿಗಳಿವೆ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಕೊಳವೆಬಾವಿ ಮೋಟರ್​ಗೆ ಅಳವಡಿಸಿದ ಕೇಬಲ್ ಕಳವು ಮಾಡುತ್ತಿದ್ದಾರೆ ಎಂದು ರೈತ ಅಜಯ್ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಳೆ ಹಾನಿ, ಬೆಲೆ ಕುಸಿತದ ನಡುವೆ ಮೋಟರ್ ಪಂಪ್​ಗಳಿಗೆ ಅಳವಡಿಸಿರುವ ಕೇಬಲ್ ಕಳ್ಳತನವು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ಕಳ್ಳರ ಜಾಲ ಪತ್ತೆಗೆ ಬಲೆ ಬೀಸಿ ರೈತರಿಗೆ ನಷ್ಟ ತುಂಬಿಕೊಡಬೇಕು ಎಂದು ಕೃಷಿಕರು ಮನವಿ ಮಾಡಿದ್ದಾರೆ.

ರೈತ ಅರಿಶಿನಗುಂಡಿ ನಾಗರಾಜ್ ಮಾತನಾಡಿ, ಒಂದೆರಡು ತಿಂಗಳಿಂದ ಈ ಭಾಗದಲ್ಲಿ ಹೆಚ್ಚು ಕೇಬಲ್ ಕಳ್ಳತನವಾಗುತ್ತಿವೆ ಎಂದರು. ಈ ಸಂದರ್ಭದಲ್ಲಿ ಅರಿಶಿನಗುಂಡಿ ಎನ್.ಎಂ. ಸಂತೋಷ್, ಎನ್.ಬಿ. ಪ್ರಭು, ಸಾಹುಕಾರ್ ನಾಗರಾಜ್, ಚಿತ್ತಪ್ಪ, ಅಜ್ಜಪ್ಪ, ಮರಳುಸಿದ್ದಪ್ಪ, ಆದರ್ಶ, ಭೀಮರಾಜ್, ಮಂಜಣ್ಣ, ಪರಮೇಶ್, ಅಜ್ಜಯ್ಯ ಮತ್ತಿತರರಿದ್ದರು.

ಎಲ್ಲೆಲ್ಲಿ ಎಷ್ಟು ಕಳವು: ಭಾನುವಾರ ರಾತ್ರಿಯೊಂದೇ ಅರಿಶಿಣ ಗುಂಡಿ ಹರೀಶ್, ರಾಮಲಿಂಗಪ್ಪ, ಎನ್.ಎಸ್. ಮಂಜಣ್ಣ, ಎಸ್. ಬಸಪ್ಪ, ಬಿ.ಪಿ. ಬಸವಂತ್ ಕುಮಾರ್, ಓಬಪ್ಪ, ಯು.ಎಮ್ ಸಿದ್ದೇಶ್, ಭೀಮರಾಜು, ಸಿ.ಎಸ್. ನಾಗರಾಜ್ ಮತ್ತು ವೆಂಕಟೇಶ್ ಅವರ ಜಮೀನಿನಲ್ಲಿ ಕ್ರಮವಾಗಿ 10 ಮೀ, 30 ಮೀ, 10 ಮೀ, 10 ಮೀ, 20 ಮೀ, 10 ಮೀ, 10 ಮೀ, 10 ಮೀ, 10 ಮೀ, 70 ಮೀ ಸೇರಿ ಸುಮಾರು 55 ಸಾವಿರ ಬೆಲೆಯ ಕೇಬಲ್ ಕಳ್ಳತನವಾಗಿದೆ ಎಂದು ಠಾಣೆಯಲ್ಲಿ ಕೃಷಿಕರು ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net