

ಬಾಗಲಕೋಟೆ : (THEFT CASE ) ಮುಧೋಳದ ನಗರದ ಸಿದ್ರಾಮೇಶ್ವರ ಕಾಲೋನಿಯಲ್ಲಿರುವ ಮನೆಯಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ಯುವತಿಯೊಬ್ಬಳು ಅಮೇರಿಕಾದಲ್ಲೇ ಕುಳಿತು ತಪ್ಪಿಸಿದ್ದಾರೆ.
ನಡೆದಿದ್ದೇನು?:
ಮುಧೋಳದ ಯುವತಿಯೊಬ್ಬಳು ಅಮೆರಿಕಾದಲ್ಲಿ ಸಾಪ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾಳೆ. ಅಮೆರಿಕಾದಲ್ಲಿ ಇರುವ ಶೃತಿ ಮುಧೋದ ಸಿದ್ರಾಮೇಶ್ವರ ಕಾಲೋನಿಯಲ್ಲಿ ತನ್ನ ಮನೆಯ ರಕ್ಷಣೆಗಾಗಿ ಸಿಸಿ ಕ್ಯಾಮರಾ ಹಾಕಿಸಿದ್ದಾರೆ. ಒಂದು ದಿನ ಸಿಸಿ ಫುಟೇಜ್ ಚೆಕ್ ಮಾಡುತ್ತಿರುವಾಗ ರಾತ್ರಿ ಮನೆಗೆ ಇಬ್ಬರ ಕಳ್ಳರು ನುಗ್ಗಿದ ವಿಚಾರ ಶೃತಿಗೆ ಗೊತ್ತಾಗಿದೆ. ಸಂಕಪ್ಪನವರ ಎಂಬುವರ ಮನೆ ಕಳ್ಳತನ ಮಾಡಲು ಲೂಟಿಕೋರರು ಯತ್ನಿಸಿದ್ದರು.
ತಕ್ಷಣವೇ ಅಮೆರಿಕಾದಲ್ಲಿದ್ದ ಶೃತಿ ಮನೆಯಲ್ಲಿದ್ದ ತನ್ನವೃದ್ಧ ತಂದೆ ಕರೆ ಮಾಡಿ ಅಲರ್ಟ್ ಮಾಡಿದ್ದರು. ಮನೆಯಲ್ಲಿದ್ದ ಹನಮಂತಗೌಡ ಸಂಕಪ್ಪನವರ ಎದ್ದು ಲೈಟ್ ಹಾಕಿ, ಬಾಗಿಲು ತೆರೆದ ತಕ್ಷಣ ಕಳ್ಳರು ಅಲ್ಲಿಂದ ಓಡಿ ಹೋಗಿದ್ದಾರೆ.
ಮುಧೋಳ ನಗರದಲ್ಲಿ ಜಿಲ್ಲೆಯಲ್ಲಿ ಮನೆ ಕಳ್ಳರ ಹಾವಳಿ ಹೆಚ್ಚಾಗಿದೆ. ಆದರೆ ಅಮೆರಿಕಾದಲ್ಲಿರುವ ಶೃತಿಯ ಜಾಗೃತೆಯಿಂದ ನಿನ್ನೆ ತಡರಾತ್ರಿ ಮನೆಗಳ್ಳತನಕ್ಕೆ ಯತ್ನ ವಿಫಲವಾಗಿದೆ. ಕಳ್ಳರಿಬ್ಬರು ಮನೆಗೆ ನುಗ್ಗಿರುವ ದೃಶ್ಯ ಸಿಸಿ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.