ಪ್ರಯಾಣಿಕೆಯ ಚಿನ್ನ ಕದ್ದ ರಿಕ್ಷಾ ಚಾಲಕ

arrested
Published on

ಕಾಸರಗೋಡು: ಆಟೋರಿಕ್ಷಾ ಬಾಡಿಗೆಗೆ ಕರೆದೊಯ್ದ ಮಹಿಳೆ ಬ್ಯಾಗ್‌ನಿಂದ ಒಂದೂವರೆ ಪವನ್‌ನ ಚಿನ್ನದ ಬಳೆ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆಟೋಚಾಲಕ, ಉಪ್ಪಳ ಮಣ್ಣಂಗುಳಿ ನಿವಾಸಿ ಮಹಮ್ಮದ್ ಸಾಕಿಬ್ ಎಂಬಾತನನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಉಪ್ಪಳ ಕೋಡಿಬೈಲು ನಿವಾಸಿ ಆಯಿಷತ್ ಮಿಯಾಸ ಚಿನ್ನ ಕಳೆದುಕೊಂಡವರು. ಮಹಮ್ಮದ್ ಸಾಕಿಬ್ ಚಲಾಯಿಸುತ್ತಿರುವ ಆಟೋರಿಕ್ಷಾದಲ್ಲಿ ಆಯಿಷತ್ ಮಿಯಾಸ ಮಾ.24ರಂದು ಆನೆಕಲ್ಲಿನಲ್ಲಿರುವ ತಾಯಿಮನೆಗೆ ತೆರಳಿದ್ದು, ಅಲ್ಲಿ ಆಟೋರಿಕ್ಷಾದಲ್ಲಿ ಬ್ಯಾಗ್ ಇರಿಸಿ ಮನೆಗೆ ತೆರಳಿ ನಂತರ ಅದೇ ರಿಕ್ಷಾದಲ್ಲಿ ವಾಪಸಾಗಿದ್ದಾರೆ. ರಿಕ್ಷಾ ಹೊಸಂಗಡಿ ತಲುಪುತ್ತಿದ್ದಂತೆ ಅಲ್ಲಿ ಆಯಿಷತ್ ಮಿಯಾಸ ಅವರನ್ನು ಇಳಿಸಿ ಬೇರೆ ರಿಕ್ಷಾದಲ್ಲಿ ಮನೆಗೆ ತೆರಳುವಂತೆ ತಿಳಿಸಿ ಚಾಲಕ ಬೇರೆಕಡೆ ತೆರಳಿದ್ದ. ಅಲ್ಪಹೊತ್ತಿನಲ್ಲಿ ಬ್ಯಾಗ್ ತಪಾಸಣೆ ನಡೆಸಿದಾಗ ಅದರೊಳಗಿದ್ದ ಚಿನ್ನದ ಬಳೆಗಳು ನಾಪತ್ತೆಯಾಗಿತ್ತು. ಕಳವುಗೈದ ಚಿನ್ನವನ್ನು ಉಪ್ಪಳದ ಜ್ಯುವೆಲ್ಲರಿ ಒಂದಕ್ಕೆ 91 ಸಾವಿರ ರೂ.ಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net