ಚಿನ್ನಾಭರಣ ಜತೆಗೆ ಮೇಕೆಯನ್ನೂ ಕದ್ದೊಯ್ದ ಕಳ್ಳರು

goat
ಸಾಂದರ್ಭಿಕ ಚಿತ್ರ
Published on

ಮೈಸೂರು: ತಾಲೂಕಿನ ಜಯಪುರ ಹೋಬಳಿಯ ಗೌಹಳ್ಳಿ ಗ್ರಾಮದಲ್ಲಿ ಶನಿವಾರ ಮನೆಯೊಂದರ ಬಾಗಿಲು ಮುರಿದು 1.45 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಮೇಕೆ ಮರಿಗಳನ್ನು ಕಳವು ಮಾಡಿದ್ದಾರೆ.

ಗ್ರಾಮದ ನಿವಾಸಿ ಬಸವರಾಜು ಅವರ ಮನೆಯಲ್ಲಿ ಕಳ್ಳತವು ನಡೆದಿದೆ. ಬಸವರಾಜು ಅವರು ಕುಟುಂಬ ಸಹಿತ ಶನಿವಾರ ರಾತ್ರಿ ದೇವಸ್ಥಾನಕ್ಕೆ ತೆರಳಿದ್ದರು. ಇಂತಹ ಒಂದು ಸಂದರ್ಭಕ್ಕೆ ಕಾಯುತ್ತಿದ್ದ ಕಳ್ಳರು ಮನೆಯ ಬಾಗಿಲು ಮುರಿದು ಬೀರುವಿನಲ್ಲಿದ್ದ 25 ಗ್ರಾಂ ಚಿನ್ನಾಭರಣ ಹಾಗೂ ಮನೆಯ ಹೊರ ಆವರಣದಲ್ಲಿ ಕಟ್ಟಿ ಹಾಕಿದ್ದ ಎರಡು ಮೇಕೆ ಮರಿಗಳನ್ನು ಕದ್ದೊಯ್ದಿದ್ದಾರೆ. ಜಯಪುರ ಪೊಲೀ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net