ಬೈಕ್‌ನಲ್ಲಿದ್ದ 5 ಲಕ್ಷ ರೂ. ಕಳ್ಳತನ

Channagiri, Police, Complaint, Robbery,
Published on

ಬೈಲಹೊಂಗಲ: ಪುರಸಭೆ ಆವರಣದಲ್ಲಿ ನಿಲ್ಲಿಸಿದ್ದ ಬೈಕ್ ಡಿಕ್ಕಿಯಲ್ಲಿದ್ದ 5 ಲಕ್ಷ ರೂ. ಕಳ್ಳತನವಾದ ಘಟನೆ ಪಟ್ಟಣದಲ್ಲಿ ಈಚೆಗೆ ನಡೆದಿದೆ.

ಬಿಜೆಪಿ ಮುಖಂಡ ಶ್ರೀಶೈಲ ಶಂಕರೆಪ್ಪ ಯಡಳ್ಳಿ ಅವರು ಬ್ಯಾಂಕ್‌ನಿಂದ ಹಣ ಪಡೆದು ಬೈಕ್ ಡಿಕ್ಕಿಯಲ್ಲಿ ಇಟ್ಟುಕೊಂಡು ಕೆಲಸದ ನಿಮಿತ್ತ ಪುರಸಭೆಗೆ ಬಂದಿದ್ದರು. ಕಚೇರಿ ಒಳಗೆ ಹೋಗಿ ಪುನಃ ಬಂದು ಕಾಗದ ಪತ್ರ ತೆಗೆದುಕೊಳ್ಳಲು ಬೈಕ್ ಡಿಕ್ಕಿ ತೆರೆದಾಗ ಹಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ಯಾಂಕ್‌ನಿಂದ ಹಣ ಪಡೆದಿದ್ದನ್ನು ಗಮನಿಸಿ ಹೊಂಚು ಹಾಕಿದ ಖದೀಮರು ಪುರಸಭೆಯಲ್ಲಿ ಬೈಕ್ ನಿಲ್ಲಿಸಿದಾಗ ನಕಲಿ ಕೀ ಬಳಸಿ ಹಣ ದೋಚಿದ್ದಾರೆ. ಈ ಕುರಿತು ಸಿಸಿ ಕ್ಯಾಮರಾ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net