ಮನೆ ಕೆಲಸಗಾರರಿಂದಲೇ ಕಳವು

cyber crime
Published on

ಹುಬ್ಬಳ್ಳಿ: ಕೆಲಸಗಾರರೇ ಮನೆಯಲ್ಲಿದ್ದ 4.85 ಲಕ್ಷ ರೂ. ಮೌಲ್ಯದ ಆಭರಣ ಕಳವು ಮಾಡಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಇಲ್ಲಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಕ್ಷ್ಮೀಪುರಂ ನಿವಾಸಿ ಬೋಲಾ ಸಿಮ್ಮಾದ್ರಿ ಸುಬ್ಬರಾವ್ ಎಂಬುವವರ ಮನೆಯಲ್ಲಿ ಕಳವು ಮಾಡಲಾಗಿದೆ. ಚಾಲುಕ್ಯನಗರದ ಇಮ್ಯಾನುವೆಲ್ ಕಂದಿ ಹಾಗೂ ಕೆಲ್ವಿನ್ ಕಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಊರಿಗೆ ಹೋಗುವ ಸಲುವಾಗಿ ಮನೆ ಕೀಲಿಯನ್ನು ಇಮ್ಯಾನುವೆಲ್ ಕಂದಿಗೆ ಕೊಟ್ಟು ಹೋಗಿದ್ದಾರೆ. ಇಮ್ಯಾನುವೆಲ್ ತನ್ನ ಅಣ್ಣನ ಮಗ ಕೆಲ್ವಿನ್‌ನೊಂದಿಗೆ ಮನೆಯಲ್ಲಿ ಮಲಗಿದ್ದು, 4.70 ಲಕ್ಷ ರೂ. ಮೌಲ್ಯದ 158 ಗ್ರಾಂ ಆಭರಣ, 500 ಗ್ರಾಂ ಬೆಳ್ಳಿ ಆಭರಣ ಕಳವು ಮಾಡಿದ್ದಾರೆ ಎಂದು ದೂರು ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net