ಮನೆ ಬಾಗಿಲಿನ ಬೀಗ ಹೊಡೆದು ಕಳವು

Published on

ಬಂಗಾರಪೇಟೆ: ಪಟ್ಟಣದ ವಿಜಯನಗರ ಬಡಾವಣೆಯಲ್ಲಿ ತಡರಾತ್ರಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಮುಖ್ಯ ಬಾಗಿಲಿಗೆ ಅಳವಡಿಸಿದ್ದ ಗೇಟ್​ ಬೀಗ ಮುರಿದು, ನಂತರ ಬಾಗಿಲಿನ ಬೀಗ ಹೊಡೆದು ಮನೆಯಲ್ಲಿದ್ದ ಸುಮಾರು 1 ಕೆಜಿ 350 ಗ್ರಾಂ ಬಂಗಾರದ ವಸ್ತುಗಳು ಮತ್ತು <95 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.

ಮನೆ ಮಾಲೀಕ ಸುನಿಲ್​ ಕುಮಾರ್​ ಮತ್ತು ಕುಟುಂಬದವರು ಸೋಮವಾರ ಸಂಬಂಧಿಕರ ಮನೆಗೆ ಬೆಂಗಳೂರಿಗೆ ಹೋಗಿದ್ದ ವೇಳೆ ಕೃತ್ಯ ಎಸಗಿದ್ದಾರೆ. ಮಂಗಳವಾರ ಬೆಳಗ್ಗೆ ಮನೆ ಮಾಲೀಕರು ಬಂದು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪಟ್ಟಣದ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಶ್ವಾನದಳ, ಬೆರಳು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಕೆಜಿಎಫ್​ ಜಿಲ್ಲಾ ಎಸ್​.ಪಿ.ಶಿವಾಂಶು ರಜಪೂತ್​, ಡಿವೈಎಸ್ಪಿ ಪಾಂಡುರಂಗ, ಪೊಲೀಸ್​ ಇನ್​ಸ್ಪೆಕ್ಟರ್​ ದಯಾನಂದ್​ ಭೇಟಿ ನೀಡಿದ್ದು, ಬಂಗಾರಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net