ಮಾಡಿನ ಪಕ್ಕಾಸು ಮುರಿದು ಕೆಳಗೆ ಬಿದ್ದ ಕಳ್ಳ

theft
Published on

ಉಪ್ಪಿನಂಗಡಿ: ಕಲ್ಲೇರಿಯ ಜನತಾ ಕಾಲನಿಯಲ್ಲಿ ಮನೆಯೊಂದರ ಹೆಂಚು ತೆಗೆದು ಕಳವಿಗೆ ಮುಂದಾದ ಕಳ್ಳನೋರ್ವ ಪಕ್ಕಾಸು ಮುರಿದು ಕೆಳಗೆ ಬಿದ್ದಿದ್ದು, ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ.

ಕಲ್ಲೇರಿಯ ಫಾರೂಕ್ ಎಂಬುವರ ಮನೆಯಲ್ಲಿ ಈ ಕಳವು ಯತ್ನ ನಡೆದಿದೆ. ಕರಾಯ ಮಸೀದಿಯಲ್ಲಿ ಶುಕ್ರವಾರ ರಾತ್ರಿ ಆಯೋಜಿಸಲ್ಪಟ್ಟಿದ್ದ ಮತಪ್ರವಚನದಲ್ಲಿ ಪರಿಸರದ ಜನತೆ ಭಾಗವಹಿಸಿದ್ದರು. ಅಂತೆಯೇ ಈ ಮನೆಯೊಳಗೆ ಯಾರೂ ಇಲ್ಲವೆಂದು ಭಾವಿಸಿದ್ದ ಕಳ್ಳ ಮಾಡಿನ ಹೆಂಚು ತೆಗೆದು ಮನೆಯೊಳಗೆ ಇಳಿಯಲು ಯತ್ನಿಸಿದ್ದಾನೆ. ಪಕ್ಕಾಸು ಮುರಿದು ಕೆಳಕ್ಕೆ ಬಿದ್ದ ಶಬ್ದಕ್ಕೆ ಮನೆ ಮಂದಿ ಎಚ್ಚರಗೊಂಡಿದ್ದಾರೆ. ಫಾರೂಕ್ ಅವರ ಪತ್ನಿ ಬೊಬ್ಬೆ ಹೊಡೆದಾಗ ಕಳ್ಳ ಕಳವಿಗೆಂದು ತಂದಿದ್ದ ಪರಿಕರಗಳನ್ನೆಲ್ಲಾ ಬಿಟ್ಟು ಪರಾರಿಯಾಗಿದ್ದಾನೆ.

ತಕ್ಷಣ ಪೊಲೀಸರಿಗೆ ಹಾಗೂ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಶೋಧ ಕಾರ್ಯ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕರಾಯ, ಕುಪ್ಪೆಟ್ಟಿ, ತುರ್ಕಳಿಕೆ, ಪರಿಸರದಲ್ಲಿ ಸತತ ಮನೆ ಕಳ್ಳತನವಾಗುತ್ತಿದ್ದರೂ ಕಳ್ಳರನ್ನು ಪತ್ತೆ ಹಚ್ಚಲು ಈ ತನಕ ಸಾಧ್ಯವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net