

ಬೆಳ್ತಂಗಡಿ: ತೆಂಕಕರಂದೂರು ವಿಷ್ಣುಮೂರ್ತಿ ದೇವಸ್ಥಾನಕ್ಕೆ ಮಂಗಳವಾರ ರಾತ್ರಿ ಕಳ್ಳರು ನುಗ್ಗಿ ಕಾಣಿಕೆ ಡಬ್ಬಿ ಒಡೆದು ಡಬ್ಬದಲ್ಲಿದ್ದ ಹಣ ದೋಚಿದ್ದಾರೆ. ಅಲ್ಲದೆ ಸಿಸಿ ಟಿವಿ, ಡಿವಿಆರ್, ಮಾನಿಟರ್ ಕೂಡ ಕಳವುಗೈದಿದ್ದಾರೆ.
ದೇವಾಲಯದ ಅರ್ಚಕರು ಬುಧವಾರ ಬೆಳಗ್ಗೆ ದೇವಸ್ಥಾನಕ್ಕೆ ಬಂದಾಗ ಬಾಗಿಲಿನ ಬೀಗ ಒಡೆದು ಅರ್ಧ ಬಾಗಿಲು ತೆರೆದಿದ್ದು, ತಕ್ಷಣ ಆಡಳಿತ ಮಂಡಳಿ ಸದಸ್ಯರಿಗೆ ಮಾಹಿತಿ ನೀಡಿದ್ದರು. ಅವರು ವೇಣೂರು ಠಾಣೆಗೆ ಮಾಹಿತಿ ನೀಡಿದ್ದು, ಠಾಣಾಧಿಕಾರಿ ಸೌಮ್ಯಾ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನದಳ ಪರಿಶೀಲಿಸಿದೆ.
ಈ ಹಿಂದೆಯೂ ಇದೇ ದೇವಸ್ಥಾನದಲ್ಲಿ ದೇವರ ಉತ್ಸವ ಬಲಿಮೂರ್ತಿ ಇತರ ಅಮೂಲ್ಯ ವಸ್ತುಗಳು ಕಳವಾಗಿತ್ತು. ಈವರೆಗೂ ಕಳ್ಳರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.