

ಆನೇಕಲ್ : ತಾಲೂಕಿನ ಸೋಲೂರು ಗ್ರಾಮದ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನದ ಬೀಗ ಮುರಿದು ಚಿನ್ನಾಭರಣ ಮತ್ತು ಹುಂಡಿಯಲ್ಲಿದ್ದ ಹಣ ಕಳವು ಮಾಡಲಾಗಿದೆ.
ಭಾನುವಾರ ರಾತ್ರಿ 2ಗಂಟೆ ಸುಮಾರಿಗೆ ಖದೀಮರು ದೇವಸ್ಥಾನ ಪ್ರವೇಶಿಸಿದ್ದು, ಮೊದಲಿಗೆ ಎರಡು ಬೀಗ ಒಡೆದು ನಂತರ ಮುಖ್ಯದ್ವಾರದ ಲಾಕ್ ಮುರಿದು ದೇವಿಯ ಕತ್ತಿನಲ್ಲಿದ್ದ 20 ಗ್ರಾಂನ 4 ಚಿನ್ನದ ತಾಳಿ ಸೇರಿ ಹುಂಡಿಯಲ್ಲಿದ್ದ ಹಣ, ಬೆಳ್ಳಿ ವಸ್ತುಗಳು, ಂಟೆ ಕದ್ದು ಪರಾರಿಯಾಗಿದ್ದಾರೆ. ಅಲ್ಲದೆ ಹಣ ತೆಗೆದುಕೊಂಡ ನಂತರ ಹುಂಡಿಯನ್ನು ದೇವಸ್ಥಾನದ ಸ್ವಲ್ಪ ದೂರದಲ್ಲೇ ಎಸೆದಿದ್ದಾರೆ.
ಸೋಮವಾರ ಬೆಳಗ್ಗೆ ಅರ್ಚಕರು ದೇವಾಲಯಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಆನೇಕಲ್ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.