ಶಾಲೆಯಲ್ಲಿ ಕಳ್ಳತನ

udp-9-theft
Published on

ಮೈಸೂರು: ನಗರದ ಅಶೋಕ ರಸ್ತೆಯಲ್ಲಿರುವ ಶಾಲೆಯಲ್ಲಿ ಕಳ್ಳತನ ನಡೆದಿದೆ.


ಮೊದಲು ಈ ಶಾಲೆಯನ್ನು ಮುಸ್ಲಿಂ ಮೀನ್ ಎಜುಕೇಷನ್ ಟ್ರಸ್ಟ್ ಮೂಲಕ ನಡೆಸಲಾಗುತ್ತಿತ್ತು. ನಂತರ ಕೋರ್ಟ್ ಆದೇಶದ ಮೇರೆಗೆ ಶಾಲೆಯನ್ನು ಸರ್ಕಾರಿ ಸೆಂಟ್ರಲ್ ಉರ್ದು ಹಿರಿಯ ಬಾಲಕಿಯರ ಶಾಲೆಗೆ ಹಸ್ತಾಂತರಿಸಲಾಗಿದೆ. ಹೀಗಾಗಿ ಶಾಲೆಯನ್ನು ವಶಕ್ಕೆ ಪಡೆದು ಬೀಗ ಹಾಕಲಾಗಿತ್ತು.


ಈ ನಡುವೆ, ಶಾಲೆಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು 27 ಸಾವಿರ ರೂ. ಮೌಲ್ಯದ ಕಬ್ಬಿಣದ ಜಾಲರಿ, ಮರದ ಬಾಗಿಲು ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.

ಫೆ.12ರಂದು ಶಾಲೆಯ ಆವರಣಕ್ಕೆ ತೆರಳಿದ ಸಂದರ್ಭದಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ ಎಂದು ಶಾಲಾ ಶಿಕ್ಷಕಿ ಸೀಹಾ ಬೇಗಂ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಲಷ್ಕರ್ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net