ಕುದೂರು: ತಿಪ್ಪಸಂದ್ರ ಹೋಬಳಿಯ ಸಣ್ಣೇನಹಳ್ಳಿಯ ಶ್ರೀ ಮಾರಮ್ಮ ದೇವಿ ದೇವಾಲಯದ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ದೇವರ ಮೇಲಿದ್ದ 3 ಜತೆ ಬೆಳ್ಳಿ ಕಾಲು ಚೈನು, 4 ಗ್ರಾಂನ 2 ಚಿನ್ನದ ತಾಳಿ ಕಳವು ಮಾಡಿದ್ದಾರೆ. ಅರ್ಚಕ ನಾರಾಯಣಪ್ಪ ಕುದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ಮಾಡಿ ತನಿಖೆ ಕೈಗೊಂಡಿದ್ದಾರೆ.