

ರಟ್ಟಿಹಳ್ಳಿ: ಪಟ್ಟಣದ ರಾಣೆಬೆನ್ನೂರ ರಸ್ತೆಯಲ್ಲಿರುವ ಪ್ರಿಯದರ್ಶಿನಿ ಕಾಲೇಜ್ ಬಳಿ ಇರುವ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರದಲ್ಲಿ ಕಳ್ಳತನ ಮಾಡಿದ್ದ ಆರೋಪಿ ಬಸವರಾಜ ಭೀಮಪ್ಪ ಚಿಗರೇರನನ್ನು ಪೊಲೀಸರು ಬಂಧಿಸಿದ್ದು, 2 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರದಲ್ಲಿ ಜು. 19ರಂದು 1200 ಕೆಜಿ ಅಲ್ಯುಮಿನಿಯಂ ಕಚ್ಚಾ ವೈಂಡಿಂಗ್ ಕಾಯಿಲ್, 200 ಕೆಜಿ ಹಿತ್ತಾಳೆ ಕಚ್ಚಾ ವಸ್ತು ಸೇರಿ ಒಟ್ಟು 2 ಲಕ್ಷ ಮೌಲ್ಯದ ವಸ್ತುಗಳು ಕಳ್ಳತನವಾಗಿದ್ದವು. ಅಲ್ಲಿಯೇ ಕೆಲಸ ಮಾಡುತ್ತಿದ್ದ ಬಸವರಾಜ ಕಳವು ಮಾಡಿದ್ದರ ಕುರಿತು ದೂರು ದಾಖಲಾಗಿತ್ತು. ಸ್ಥಳೀಯ ಪೊಲೀಸರು 24 ಗಂಟೆಯೊಳಗಾಗಿ ಆರೋಪಿಯನ್ನು ವಸ್ತುಗಳ ಸಮೇತ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪಿಎಸ್ಐ ಜಗದೀಶ ಜಿ. ತಿಳಿಸಿದ್ದಾರೆ.