ಮನೆಯಲ್ಲಿ ಕಳ್ಳತನ

theft
Published on

ಮೈಸೂರು: ಕನಕದಾಸ ನಗರದಲ್ಲಿರುವ ಡಾ.ಸುಬ್ರಹ್ಮಣ್ಯ ಎಂಬುವರ ಮನೆಯಲ್ಲಿ 1.2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ.


ಇವರು ಮಾ.11ರಂದು ಕುಶಾಲನಗರದಲ್ಲಿರುವ ತಮ್ಮ ಪತ್ನಿ ಮನೆಗೆ ಹೋಗಿದ್ದರು. 2 ದಿನಗಳ ನಂತರ ವಾಪಸ್ ಮನೆಗೆ ಬಂದಾಗ ಕಳ್ಳರು ಹಿಂಬಾಗಿಲು ಮೀಟಿ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ಕದ್ದೊಯ್ದಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕುವೆಂಪುನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net