

ಭಟ್ಕಳ: ದೇವಸ್ಥಾನವೊಂದರ ಬಾಗಿಲು ಮುರಿದು ಕಾಣಿಕೆ ಹುಂಡಿಯಲ್ಲಿದ್ದ ಹಣ ಕದ್ದು ಪರಾರಿಯಾಗಿರುವ ಘಟನೆ ಮುಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಬೇಹಳ್ಳಿಯಲ್ಲಿ ನಡೆದಿದೆ.
ಶನಿವಾರ ಮಧ್ಯಾಹ್ನದಿಂದ ಭಾನುವಾರ ಬೆಳಗಿನ ಅವಧಿಯಲ್ಲಿ ಬೇಹಳ್ಳಿ ಗ್ರಾಮದ ಕಾನಕೆರೆ ಜಟಕೇಶ್ವರ ದೇವಸ್ಥಾನದ ಒಳ ಹೊಕ್ಕು ದೇವಸ್ಥಾನದ ಕಾಣಿಕೆ ಡಬ್ಬಿ ಒಡೆದು ಅದರಲ್ಲಿದ್ದ ಸುಮಾರು 4 ಸಾವಿರ ರೂ. ನಗದು ಹಾಗೂ ದೇವಸ್ಥಾನಕ್ಕೆ ಅಳವಡಿಸಿರುವ 10 ಸಾವಿರ ರೂ. ಮೌಲ್ಯದ 6 ಹಿತ್ತಾಳೆ ಗಂಟೆ ಸೇರಿ ಒಟ್ಟು 14,000 ರೂ. ಮೌಲ್ಯದ ವಸ್ತುಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪಿಎಸ್ಐ ಭರಮಪ್ಪ ಬೆಳಗಲಿ ತನಿಖೆ ಕೈಗೊಂಡಿದ್ದಾರೆ.