

ಕಾರವಾರ: ಶಿಕ್ಷಕಿಯ ಮನೆಯಲ್ಲಿನ ಆಭರಣಗಳನ್ನು ಕಳ್ಳರು ದೋಚಿದ ಘಟನೆ ನಗರದ ಕೆಎಚ್‌ಬಿ ಕಾಲನಿಯಲ್ಲಿ ಸೋಮವಾರ ನಡೆದಿದೆ.
ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ಸಮೀಪದ ನಿವಾಸಿ, ಶಿಕ್ಷಕಿ ಹನೀಫಾಬಿ ಮೊಹಮದ್ ಅಖಿಲ್ ಶೇಖ್ ಅವರು ಶಾಲೆಗೆ ದಸರಾ ರಜೆ ಇದ್ದ ಕಾರಣ ತಾಯಿಯ ಮನೆಗೆ ತೆರಳಿದ್ದರು. ಮನೆಯ ಬಾಗಿಲಿನ ಬೀಗವನ್ನು ಮೀಟಿ ತೆಗೆದು, ಬೀರುವಿನಲ್ಲಿ ಇಟ್ಟಿದ್ದ 4.40 ಲಕ್ಷ ರೂ. ಮೌಲ್ಯದ 110 ಗ್ರಾಂ ಬಂಗಾರವನ್ನು ದೋಚಿದ್ದಾರೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.