ಆಭರಣದ ಅಂಗಡಿಯಲ್ಲಿ ಕಳವು

Jeveller
Published on

ಹೊನ್ನಾವರ: ತಾಲೂಕಿನ ಮಂಕಿ ಗುಳದಕೇರಿಯ ಕಾಮಾಕ್ಷಿ ಚಿನ್ನದ ಅಂಗಡಿಯ ಶಟರ್ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣ ಕಳವಾದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

ಗುಳದಕೇರಿ ಅಣ್ಣಪ್ಪ ಪ್ರಭಾಕರ ಶೇಟ್ ಎಂಬುವರ ಅಂಗಡಿಯಲ್ಲಿ ಕಳವಾಗಿದೆ. 14.55 ಲಕ್ಷ ರೂ. ಮೌಲ್ಯದ 296 ಗ್ರಾಂ ಚಿನ್ನಾಭರಣ ಹಾಗೂ 11.10 ಲಕ್ಷ ರೂ. ಮೌಲ್ಯದ 22.50 ಕೆಜಿ ಬೆಳ್ಳಿಯ ಆಭರಣ ಕಳವಾಗಿದೆ ಎಂದು ಅಣ್ಣಪ್ಪ ಪ್ರಭಾಕರ ಶೇಟ್ ಮಂಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net