ಬಟ್ಟೆ ಅಂಗಡಿಯಲ್ಲಿ ಕಳ್ಳತನ

crime
Published on

ಹುಬ್ಬಳ್ಳಿ: ಇಲ್ಲಿನ ಶಹಬಜಾರ್ ಬಟ್ಟೆ ಅಂಗಡಿಯ ಮೇಲ್ಚಾವಣಿ ತಗಡಿನ ಶೀಟ್ ತೆಗೆದು ಒಳ ಪ್ರವೇಶಿಸಿದ ಕಳ್ಳರು, ಕೌಂಟರ್ ಡ್ರಾದಲ್ಲಿದ್ದ 85 ಸಾವಿರ ರೂ. ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಮಂಟೂರ ರಸ್ತೆಯ ಮಿಲ್ಲತ್​ನಗರದ ಶಫೀವುಲ್ಲಾ ಅವರು ಕೊಟ್ಟ ದೂರಿನ ಮೇರೆಗೆ ಘಂಟಿಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net