

ಬೈಲಹೊಂಗಲ: ಕಳ್ಳತನದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು, ಕಳುವಾದ ಡಬಲ್ ಪಲ್ಟಿ ಟ್ರಾೃಕ್ಟರ್ ನೇಗಿ
ಲನ್ನು ಮಂಗಳವಾರ ವಶಪಡಿಸಿ ಕೊಂಡಿದ್ದಾರೆ. ತಾಲೂಕಿನ ದೇವಲಾ ಪುರ ಗ್ರಾಮದ ಮಂಜುನಾಥ ಬಸವರಾಜ ಮಾರಿಹಾಳ (30) ಬಂಧಿತ ವ್ಯಕ್ತಿ.
ಪಟ್ಟಣದ ಸೋಮವಾರ ಪೇಟೆಯ ಬೇರಿಂಗ್ ಚಾಳ ನಿವಾಸಿ ಶಿವಾನಂದ ಮೆಳಯ್ಯನವರ ಎಂಬುವರಿಗೆ ಸೇರಿದ ನೇಗಿಲು ಕಳ್ಳತನವಾಗಿತ್ತು. ಈ ಕುರಿತು ದೂರು ದಾಖಲಿಸಿದ್ದರು. ಸಿಪಿಐ ಮಂಜುನಾಥ ಕುಸಗಲ್ಲ, ಪಿಎಸ್‌ಐ ಈರಪ್ಪ ರಿತ್ತಿ, ದಾಳಿ ನಡೆಸಿ ಕಳ್ಳನನ್ನು ಬಂಧಿಸಿದ್ದಾರೆ. ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.