ಶ್ರೀ ಗಂಧದ ಮರ ಕಳುವು

theft
Published on

ಮಡಿಕೇರಿ

ಪೊನ್ನಂಪೇಟೆ ತಾಲೂಕು ನಿಟ್ಟೂರು ಕಾರ್ಮಾಡು ಮುಖ್ಯ ರಸ್ತೆಯ ಪಕ್ಕದಲ್ಲೇ ಇರುವ ಮೆಟ್ರಿಕ್ ಪೂರ್ವ ಗಿರಿಜನ ಬಾಲಕಿಯರ ವಸತಿ ನಿಲಯದ ಕಾಂಪೌAಡ್‌ನಲ್ಲಿ ಸಮೃದ್ಧಿಯಾಗಿ ಬೆಳೆದು ನಿಂತಿದ್ದ ಶ್ರೀಗಂಧ ಮರವನ್ನು ತಡರಾತ್ರಿಯಲ್ಲಿ ಕಳ್ಳರು ಅಪಹರಿಸಿದ್ದಾರೆ.

ಸೋಮವಾರ ನಡೆದಿದ್ದ ಗ್ರಾಮ ಸಭೆಯಲ್ಲಿ ವಸತಿ ನಿಲಯದ ಕ್ಯಾಮರಾವನ್ನು ಈ ಮರ ಕಾಣುವ ಹಾಗೆ ತಿರುಗಿಸಲು ಗ್ರಾಮಸ್ಥರು ಪ್ರಸ್ತಾಪ ಮಾಡಿದ್ದರು. ಈ ಬೆನ್ನಲ್ಲೇ ತಡರಾತ್ರಿ ಶ್ರೀಗಂಧದ ಮರಕ್ಕೆ ಕೊಡಲಿ ಏಟು ಬಿದ್ದಿದೆ.

ಕಳೆದ ವಾರವಷ್ಟೇ ತಡ ರಾತ್ರಿ ನಿಟ್ಟೂರು ಮುಖ್ಯ ರಸ್ತೆಯ ಬದಿಯಲ್ಲಿ ಮನೆಗಳಿಗೆ ನುಗ್ಗಿ ರಾತ್ರಿ ಕಳ್ಳತನ ನಡೆದಿರುವ ಬಗ್ಗೆ ವರದಿಯಾಗಿತ್ತು. ಅರಣ್ಯ ಇಲಾಖೆ ಮತ್ತು ಪೊಲೀಸರು ಕಳ್ಳರ ಬಂಧನಕ್ಕೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net