

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ನಗರದ ರಾಯನ್‌ಸಿಂಗ್‌ಪೇಟೆ 5ನೇ ಕ್ರಾಸ್‌ನಲ್ಲಿ ಶನಿವಾರ ಮಧ್ಯರಾತ್ರಿ 2.45ರ ಸುಮಾರಿಗೆ ಸ್ಕೂಟರ್‌ವೊಂದರಲ್ಲಿ ತ್ರಿಬ್ಬಲ್ ರೈಡಿಂಗ್ ಬಂದ ಕಳ್ಳರ ತಂಡ ಮನೆ ಮುಂದೆ ನಿಲುಗಡೆ ಮಾಡಿದ್ದ ಸ್ಕೂಟರ್‌ನ ಹ್ಯಾಂಡಲ್‌ಲಾಕ್ ಮುರಿದು ಕ್ಷಣಾರ್ಧದಲ್ಲಿ ಕಳವು ಮಾಡಿರುವ ಪ್ರಕರಣನಡೆದಿದೆ.
ಸ್ಥಳೀಯ ನಿವಾಸಿ ರಮೇಶ್ ಎಂಬುವರ ವಾಹನ ಕಳ್ಳತನವಾಗಿದ್ದು, ಪಕ್ಕದ ಮನೆಯವರ ಸಿಸಿ ಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.
ದೃಶ್ಯ ಅಸ್ಪಷ್ಟ!
ರಾಯನ್‌ಸಿಂಗ್‌ಪೇಟೆ 5ನೇ ರಸ್ತೆಯಲ್ಲಿನ ಬೀದಿದೀಪದ ಕಂಬಗಳಲ್ಲಿ ವಿದ್ಯುತ್ ದೀಪವಿಲ್ಲದ ಪರಿಣಾಮ ಕಳ್ಳತನ ದೃಶ್ಯ ಅಸ್ಪಷ್ಟವಾಗಿದೆ. ಕಳ್ಳರ ಮುಖಚಹರೆ ಹಾಗೂ ಕಳವು ಮಾಡಲು ಬಳಸಿದ್ದ ವಾಹನ ನೋಂದಣಿ ಸಂಖ್ಯೆ ಕಾಣುತ್ತಿಲ್ಲ. ಹಲವು ಬಾರಿ ನಗರಸಭೆಯವರಿಗೆ ಮನವಿ ಮಾಡಿದ್ದರೂ ಬೀದಿದೀಪಗಳ ದುರಸ್ತಿ ಮಾಡಿಸಿಲ್ಲ ಎಂದು ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದಿದೀಪಗಳಿದ್ದರೆ ಕಳ್ಳತನ ಪ್ರಮಾಣ ಕಡಿಮೆ ಇರುತ್ತದೆ. ಅಲ್ಲದೆ ಕೃತ್ಯದ ದೃಶ್ಯ ಸ್ಪಷ್ಟವಾಗುವುದರಿಂದ ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಲು ಸಹಕಾರಿಯುತ್ತದೆ ಆದರೆ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.
ನಮ್ಮ ಮನೆಯಲ್ಲಿನ ಸಿಸಿ ಟಿವಿ ಕ್ಯಾಮರಾದಲ್ಲಿ ಸ್ಕೂಟರ್ ಕಳವಿನ ಪ್ರಕರಣದ ದೃಶ್ಯ ಸೆರೆಯಾಗಿದೆ, ಆದರೆ ಬೀದಿ ದೀಪವಿಲ್ಲದ ಕಾರಣ ದೃಶ್ಯ ಅಸ್ಪಷ್ಟವಾಗಿದೆ. ನಗರಸಭೆಗೆ ಹಲವು ಬಾರಿ ದೂರು ನೀಡಿದ್ದರೂ ಕ್ರಮಕ್ಕೆ ಮುಂದಾಗಿಲ್ಲ. ಈ ಪ್ರಕರಣ ನಂತರ ಒಂದು ಕಂಬಕ್ಕೆ ದೀಪ ಹಾಕಿಸಿದ್ದಾರೆ ಇನ್ನೊಂದಕ್ಕೆ ಇನ್ನೂ ಹಾಕಿಲ್ಲ. ನಗರದಲ್ಲಿ ಹಲವು ಕಡೆ ಇದೇ ಸಮಸ್ಯೆ ಇದೆ ಸಂಬಂಧಪಟ್ಟವರು ಕ್ರಮಕ್ಕೆ ಮುಂದಾಗಬೇಕು.
ನಾಗಭೂಷನ್, ರಾಯನ್‌ಸಿಂಗ್‌ಪೇಟೆ ನಿವಾಸಿ