ಮನೆಗೆ ನುಗ್ಗಿ 22 ಪವನ್ ಚಿನ್ನಾಭರಣ ಕಳವು

Kottur theft
Published on

ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಣಿಯಾಟ್ ಬ್ಯಾಂಕ್ ಸನಿಹದ ನಿವಾಸಿ ಎಂ.ಕೆ ಜುಸೀಲಾ ಎಂಬುವರ ಮನೆಗೆ ನುಗ್ಗಿದ ಕಳ್ಳರು 22 ಪವನ್ ಚಿನ್ನಾಭರಣ ದೋಚಿದ್ದಾರೆ. ಜುಸೀಲಾ ಹಾಗೂ ಮನೆಯವರು ಶುಕ್ರವಾರ ಮಧ್ಯಾಹ್ನ 3.30ಕ್ಕೆ ಮನೆಗೆ ಬೀಗ ಹಾಕಿ ಪಯ್ಯನ್ನೂರಿಗೆ ಶಾಪಿಂಗ್‌ಗೆ ತೆರಳಿದ್ದು, ರಾತ್ರಿ ವಾಪಸಾದಾಗ ಕಳವು ಬೆಳಕಿಗೆ ಬಂದಿದೆ. ಎರಡನೇ ಮಹಡಿಯ ಎದುರಿನ ಬಾಗಿಲ ಬೀಗ ಒಡೆದು ಒಳನುಗ್ಗಿ, ಕಪಾಟಿನಲ್ಲಿರಿಸಿದ್ದ ನೆಕ್ಲೆಸ್, ಬಳೆ, ಬೆಂಡೋಲೆ ಸೇರಿದಂತೆ 22 ಪವನ್ ಚಿನ್ನಾಭರಣ ಕಳವುಗೈದಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಪಾಟಿನಲ್ಲಿದ್ದ ಬಟ್ಟೆಬರೆ ಚೆಲ್ಲಾಪಿಲ್ಲಿಗೊಳಿಸಲಾಗಿದ್ದು, ಮನೆಯ ಕೆಳ ಅಂತಸ್ತಿನ ಹಿಂಭಾಗದ ಗ್ರಿಲ್ಸ್ ತುಂಡರಿಸಿದ ಸ್ಥಿತಿಯಲ್ಲಿತ್ತು. ಚಂದೇರ ಠಾಣೆ ಇನ್‌ಸ್ಪೆಕ್ಟರ್ ಕೆ.ಪ್ರಶಾಂತ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net