ಆಂಜನೇಯ ಗುಡಿಗೆ ಕನ್ನ ಹಾಕಿದಾತ ಸೆರೆ

New Project (16)
Published on

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಒಳಪಟ್ಟ ಸ್ಥಳೀಯ ಅಭಯ ಆಂಜನೇಯ ಗುಡಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ 24 ಗಂಟೆಯೊಳಗೆ ಆರೋಪಿಯನ್ನು ಸುಬ್ರಹ್ಮಣ್ಯ ಠಾಣೆಯ ಉಪನಿರೀಕ್ಷಕ ಕಾರ್ತಿಕ್.ಕೆ ನೇತೃತ್ವದ ಪೊಲೀಸರ ತಂಡ ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಧಾರವಾಡ ಮೂಲದ ವೀರಣ್ಣ ಗೌಡ(26) ಆರೋಪಿ.

ದೇಗುಲದ ಪಾರ್ಕಿಂಗ್ ಸ್ಥಳದಲ್ಲಿ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ಈತನನ್ನು ಸುಬ್ರಹ್ಮಣ್ಯ ಠಾಣೆಯ ಉಪನಿರೀಕ್ಷಕ ಕಾರ್ತಿಕ್.ಕೆ ಮತ್ತು ಪೊಲೀಸರ ತಂಡ ಹಿಡಿದು ವಿಚಾರಣೆ ಮಾಡಿದರು. ಬಳಿಕ ಜಾಗವೊಂದರ ಬಳಿ ಮೂಟೆ ಕಟ್ಟಿರುವುದು ಕಂಡು ಬಂದಿದ್ದು, ಸುಮಾರು 15 ಸಾವಿರ ರೂ.ಗೂ ಹೆಚ್ಚು ಮೊತ್ತದ ಬೆಲೆ ಬಾಳುವ ಗಂಟೆ, ಕಾಲುದೀಪ, ತಟ್ಟೆ, ತೂಗುದೀಪ , ಸಿಸಿ ಕ್ಯಾಮರಾ ಸ್ವಿಚ್ ಸೇರಿದಂತೆ ಕಳ್ಳತನ ಮಾಡಿದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net