ಜೈಲಿಂದ ಬಿಡುಗಡೆಗೊಂಡಾತ ಮತ್ತೆ ಬಂಧನ

arrested
Published on

ಕಾಸರಗೋಡು: ಕಳವು ಪ್ರಕರಣಕ್ಕೆ ಸಂಬಂಧಿಸಿ ಜೈಲು ಶಿಕ್ಷೆ ಅನುಭವಿಸಿ ಹೊರಬಂದ ವ್ಯಕ್ತಿಯೊಬ್ಬ ಇರಿತ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಜೈಲುಪಾಲಾಗಿದ್ದಾನೆ.

ಚಟ್ಟಂಚಾಲ್ ಪುತ್ತರಿಯಡ್ಕ ನಿವಾಸಿ ಮಹಮ್ಮದ್ ರಫೀಕ್ ಅಲಿಯಾಸ್ ಅಪ್ಪಿ ರಫೀಕ್ ಬಂಧಿತ. ಚಟ್ಟಂಚಾಲ್ ನಿವಾಸಿ ಇಬ್ರಾಹಿಂ ಎಂಬುವರಿಗೆ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ರಫೀಕ್‌ನನ್ನು ಬಂಧಿಸಲಾಗಿದೆ. ಇಬ್ರಾಹಿಂ ಚಲಾಯಿಸುತ್ತಿದ್ದ ಕಾರು ಮತ್ತು ಮಹಮ್ಮದ್ ರಫೀಕ್ ಚಲಾಯಿಸುತ್ತಿದ್ದ ವಾಹನದ ಮಧ್ಯೆ ಅಪಘಾತ ನಡೆದಿದ್ದು, ಈ ಬಗ್ಗೆ ಇಬ್ರಾಹಿಂ ಪೊಲೀಸರಿಗೆ ದೂರು ನೀಡಿದ್ದರು. ದೂರು ನೀಡಿದ ಸಿಟ್ಟಿನಲ್ಲಿ ಇಬ್ರಹಿಂ ಅವರನ್ನು ಮಹಮ್ಮದ್ ರಫೀಕ್ ಇರಿದು ಗಾಯಗೊಳಿಸಿದ್ದಾನೆನ್ನಲಾಗಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿ ಕರ್ನಾಟಕದಲ್ಲಿ ಶಿಕ್ಷೆ ಅನುಭವಿಸಿ ಇತ್ತೀಚೆಗಷ್ಟೆ ಮಹಮ್ಮದ್ ರಫೀಕ್ ಬಿಡುಗಡೆಗೊಂಡಿದ್ದು, ಇರಿತ ಪ್ರಕರಣದಲ್ಲಿ ಮತ್ತೆ ಜೈಲು ಸೇರಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net