

ಮೈಸೂರು: ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ನಗರದ ಕಲಾಮಂದಿರದ ರಂಗ ತಾಲೀಮು ಕೊಠಡಿಯಲ್ಲಿ ಗುರುವಾರ ‘ಯುವಕರಿಗೆ ರಂಗಭೂಮಿಯ ಅವಶ್ಯಕತೆ’ ಮತ್ತು ‘ಬೆಪ್ಪು ತಕ್ಕಡಿ ಬೋಳೇಶಂಕರ ನಾಟಕದ ಹೂರಣ’ದ ಕುರಿತು ವಿಚಾರ ಸಂಕಿರಣ ಮತ್ತು ಸಂವಾದ ಏರ್ಪಡಿಸಲಾಗಿತ್ತು.
ಬದುಕಿನಲ್ಲಿ ಎದುರಾಗುವ ಹಲವು ಕಷ್ಟಗಳನ್ನು ಧೈರ್ಯವಾಗಿ ಎದುರಿಸುವ ಹಾಗೂ ಬದುಕಿನಲ್ಲಿ ಸ್ಫೂರ್ತಿ ತುಂಬುವ ಕಾರ್ಯವನ್ನು ರಂಗಭೂಮಿ ಮಾಡುತ್ತದೆ. ರಂಗಭೂಮಿ ಬದುಕನ್ನು ಕನ್ನಡಿಯಂತೆ ತೋರಿಸುತ್ತದೆ. ರಂಗಭೂಮಿ ಸರಳವಾಗಿ ಬದುಕುವುದನ್ನು ಕಲಿಸುತ್ತದೆ. ಇದಕ್ಕೆ ರಂಗಭೂಮಿ ಹಿನ್ನೆಲೆಯ ವರನಟ ಡಾ. ರಾಜ್‌ಕುಮಾರ್ ಅವರೇ ಸಾಕ್ಷಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಹೇಳಿದರು.
ಹಿರಿಯ ಕಲಾವಿದ ರಾಮನಾಥ್ ಯುವಜನರಿಗೆ ರಂಗಭೂಮಿಯ ಅವಶ್ಯಕತೆ ಕುರಿತು ಮಾತನಾಡಿದರು. ಹಿರಿಯ ರಂಗಕರ್ಮಿ ಕೃಷ್ಣಕುಮಾರ್ ನಾರ್ಣಕಜೆ, ಕದಂಬ ರಂಗ ವೇದಿಕೆಯ ಅಧ್ಯಕ್ಷ ರಾಜಶೇಖರ ಕದಂಬ, ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯ ನಿರ್ದೇಶಕರಾದ ಕೃಷ್ಣ ಜನಮನ, ದಿನಮಣಿ ಇದ್ದರು.