

ಬೆಳಗಾವಿ: ರಂಗಭೂಮಿಯಲ್ಲಿ ಸತ್ಯದ ಹುಡುಕಾಟ ನಡೆಯುತ್ತದೆ. ಈ ಹುಡುಕಾಟದ ಮಾರ್ಗವೇ ಶಿಣ. ಹೀಗಾಗಿ ರಂಗಭೂಮಿ ಉಳಿವು ಶಿಕ್ಷಣ ಕ್ಷೇತ್ರದಿಂದ ಸಾಧ್ಯ ಎಂದು ಹಿರಿಯ ರಂಗಕರ್ಮಿ ಬಾಬಾಸಾಹೇಬ ಕಾಂಬಳೆ ಹೇಳಿದರು.
ಮಹಾಂತೇಶ ನಗರ ರಹವಾಸಿಗಳ ಸಂದ ಶಿಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಕನ್ನಡ ಸಂ ಹಾಗೂ ಐಕ್ಯೂಎಸಿ ಅಡಿಯಲ್ಲಿ ಹಮ್ಮಿಕೊಂಡಿದ್ದ "ಪಠ್ಯದಲ್ಲಿ ರಂಗ ಚಟುವಟಿಕೆಗಳು& ಶಿಣದಲ್ಲಿ ರಂಗಭೂಮಿಯ ಮಹತ್ವತೆ' ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರಾಚಾರ್ಯ ಡಾ.ನಿರ್ಮಲಾ ಬಟ್ಟಲ, ಪೊ.ಸೋನಲ್ ಚಿನಿವಾಲ, ಡಾ.ಗೀತಾ ದಯಣ್ಣವರ, ಪೊ.ಸುನಿಲ ಪಾಣಿ, ಪೊ.ಮಲ್ಲಿಕಾರ್ಜುನ ಜಮಖಂಡಿ, ವಿವಿಧ ಸೆಮಿಸ್ಟರ್ ವಿದ್ಯಾರ್ಥಿಗಳು ಹಾಗೂ ರಾಣಿ ಚನ್ನಮ್ಮ ವಿವಿಯ ಎಂ.ಇಡಿ ಪ್ರಶಿಣಾರ್ಥಿಗಳು ಇದ್ದರು. ಮುಸ್ಕಾನ ಲಾಡನ್ನವರ ಪ್ರಾರ್ಥಿಸಿದರು, ಡಾ.ಎಸ್.ವಿ.ವಾಲಿಶೆಟ್ಟಿ ಸ್ವಾಗತಿಸಿದರು. ಪೊ.ಮಂಜುನಾಥ ಕಲಾಲ ನಿರೂಪಿಸಿದರು.