ರಂಗ ಚಟುವಟಿಕೆಗಳ ಉಳಿವಿಗೆ ಶಿಬಿರಗಳು ಅಗತ್ಯ

Sirguppa Drama
ಸಿರಗುಪ್ಪದ ಅಮೃತೇಶ್ವರ ದೇವಸ್ಥಾನದ ಆವರಣದಲ್ಲಿ ನೇಹರಂಗ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಉಚಿತ ಬೇಸಿಗೆ ರಂಗಶಿಬಿರದ ವಿದ್ಯಾರ್ಥಿಗಳು ಸಮಾರೋಪ ಸಮಾರಂಭದಲ್ಲಿ ನೀರು ನಾಟಕ ಪ್ರದರ್ಶಿಸಲಾಯಿತು.
Published on

ಸಿರಗುಪ್ಪ: ರಂಗ ಚಟುವಟಿಕೆಗಳಿಂದ ಮಕ್ಕಳಲ್ಲಿ ಸಾಂಸ್ಕೃತಿಕ ಜ್ಞಾನ ಹೆಚ್ಚುತ್ತದೆ ಎಂದು ನೇಹರಂಗ ಸಂಸ್ಥೆಯ ಸದಸ್ಯ ನಿರಂಜನ ಸ್ವಾಮಿ ಹೇಳಿದರು.

ನಗರದ ಅಮೃತೇಶ್ವರ ದೇವಸ್ಥಾನದ ಆವರಣದಲ್ಲಿ ವಿವಿಧ ಗ್ರಾಮಗಳ ವಿದ್ಯಾರ್ಥಿಗಳಿಗಾಗಿ ಅಮೃತೇಶ್ವರ ದೇವಸ್ಥಾನ ಟ್ರಸ್ಟ್, ನೇಹರಂಗ ಸಂಸ್ಥೆಯಿಂದ 21 ದಿನ ಹಮ್ಮಿಕೊಂಡಿದ್ದ ಉಚಿತ ಬೇಸಿಗೆ ರಂಗಶಿಬಿರದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದರು.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಹಾವಳಿಯಿಂದ ರಂಗ ಚಟುವಟಿಕೆಗಳಿಗೆ ಮಹತ್ವ ಕಡಿಮೆಯಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ರಂಗ ಚಟುವಟಿಕೆಗಳು ಜೀವಂತವಾಗಿರಲು ಇಂತಹ ಶಿಬಿರಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು ಎಂದರು. ಅಮೃತೇಶ್ವರ ದೇವಸ್ಥಾನ ಟ್ರಸ್ಟ್‌ನ ಸದಸ್ಯ ಸದಾಶಿವ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಹೊಸಪೇಟೆಯ ಇನ್ಸಾಫ್, ಗಂಗಾವತಿಯ ರಾಜಶೇಖರ, ರಾಮದುರ್ಗದ ಮಹಾಂತೇಶ್ ನೀರು ನಾಟಕ ಪ್ರದರ್ಶಿಸಿದರು. ಉಮೇಶ್ ಪತ್ತಾರ, ಪ್ರಕಾಶ್ ಬಡಿಗೇರ್ ಸಂಗೀತ, ನಿರ್ದೇಶಕರಾಗಿ ಎಂ.ವೆಂಕಟೇಶ್, ಪರಿಕರ ಮತ್ತು ರಂಗ ಸಜ್ಜಿಕೆಯನ್ನು ಪಿ.ಎಂ.ಯಶಾನ್ ನಿರ್ವಹಿಸಿದರು. ಗುರುಬಸವ ಮಠದ ಬಸವಭೂಷಣ ಸ್ವಾಮೀಜಿ, ಬಸವರಾಜಪ್ಪ ಶರಣರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net