

ತುಮಕೂರು: ಎಲ್ಲ ವಾಧ್ಯಮಗಳಿಗಿಂತಲೂ ರಂಗ ವಾಧ್ಯಮ ಪ್ರಭಾವಶಾಲಿಯಾಗಿದ್ದು, ಇದರ ಮುಖೇನ ನಾವಿಂದು ಅರಿವು ಮೂಡಿಸುವಂತಹ ಅಗತ್ಯವಿದೆ ಎಂದು ಆಯುಷ್ ವೈದ್ಯಾಧಿಕಾರಿ ವೀರೇಶ್ ಕಲ್ಮಠ್ ಅಭಿಪ್ರಾಯಪಟ್ಟರು.
ತಾಲೂಕಿನ ಮೆಳೇಹಳ್ಳಿ ವಿ.ರಾಮಮೂರ್ತಿ ರಂಗಸ್ಥಳದಲ್ಲಿ ಡಮರುಗ ರಂಗ ಸಂಪನ್ಮೂಲ ಕೇಂದ್ರದ ವತಿಯಿಂದ ಪ್ರಯೋಗಿಸಿದ ‘ವೈಶಂಪಾಯನ ಸರೋವರದಲ್ಲಿ’ ನಾಟಕ ವೀಕ್ಷಿಸಿ ವಾತನಾಡಿದರು.ರಂಜನೆಯ ಜತೆಗೆ ಜೀವನ ಕ್ರಮಗಳನ್ನ ಅಳವಡಿಸಿಕೊಂಡು ವರ್ತವಾನಕ್ಕೆ ಹತ್ತಿರವಾಗಿಸುವ ನಾಟಕ ಪ್ರದರ್ಶನವಾಗಿದೆ, ಇಂತಹ ಪ್ರಯೋಗಗಳು ಎಲ್ಲ ಕಡೆ ನಡೆಯಬೇಕಾದ ಅನಿವಾರ್ಯತೆಯಿದೆ ಎಂದರು.
ಎಲ್ಲ ಊರುಗಳಲ್ಲಿಯೂ ಇಂತಹ ತಿಳುವಳಿಕೆ ನೀಡುವಂತಹ ಯುವಕರ ತಂಡಗಳು ಇದ್ದರೆ ಒಳ್ಳೆಯದು ಎಂಬ ಅಭಿಪ್ರಾಯಪಟ್ಟ ವೈದ್ಯ ಡಾ.ಚಂದ್ರಶೇಖರ್, ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಗಳಿಗೆ ದಾಳಿಯಿಡುತ್ತಿರುವ ಕರೊನಾ ನಿಯಂತ್ರಣಕ್ಕೆ ಅಗತ್ಯ ಸುರಕ್ಷತಾ ಕ್ರಮಗಳನ್ನ ಅನುಸರಿಸಬೇಕೆಂದು ಮನವಿ ವಾಡಿದರು.
ಕೆಸ್ತೂರು ವಿಭಾಗದ 13 ಜನ ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಡಾ.ಎಂ.ಸಿ.ರಾಧಾಕೃಷ್ಣ, ಆರೋಗ್ಯ ಕೇಂದ್ರದ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತರಾಯಪ್ಪ, ಡಮರುಗ ಉಮೇಶ್ ಮತ್ತಿತರರು ಇದ್ದರು.
ಮೆಳೇಹಳ್ಳಿ ದೇವರಾಜ್ ನಿರ್ದೇಶನದಲ್ಲಿ ಮೂಡಿಬಂದ ವೈಶಂಪಾಯನ ಸರೋವರ ನಾಟಕದಲ್ಲಿ ಭರತ್ ಡಮರುಗ, ಸ್ನೇಹ, ತನುಜಾ, ಲಯ, ಪಲ್ಲವಿ ಶಂಕರ್, ಚಿನ್ಮಯ ಕಗ್ಗೆರೆ, ಮೆಳೇಹಳ್ಳಿ ದೇವರಾಜ್ ಮನೋಜ್ಞವಾಗಿ ಅಭಿನಯಿಸಿದರು. ಪ್ರಕಾಶ್ ಮೆಳೇಹಳ್ಳಿಯವರ ಬೆಳಕು ವಿನ್ಯಾಸ, ಅನಿಲ್ ಕುವಾರ್‌ರವರ ರಂಗಸಜ್ಜಿಕೆ, ರೇಖಾ ದೇವರಾಜ್‌ರವರ ವಸ್ತ್ರವಿನ್ಯಾಸ, ಅನಿತಾ ಪ್ರಕಾಶ್‌ರವರ ಪ್ರಸಾದನ ನಾಟಕಕ್ಕೆ ಮೆರುಗು ನೀಡಿತು. ನಾಟಕ ವರ್ತವಾನದ ಆತಂಕಗಳಿಗೆ ಸ್ಪಂದಿಸುವಲ್ಲಿ ಯಶಸ್ವಿಯಾಯಿತು.