

ಶಿವಮೊಗ್ಗ: ಸಾಗರ ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿ ಹೆದ್ದಾರಿಯಲ್ಲಿ ಸ್ಟಂಟ್ ಮಾಡುತ್ತಿದ್ದ ಯುವಕನಿಗೆ ಶಿವಮೊಗ್ಗ ನ್ಯಾಯಾಲಯ 5500 ರೂ. ದಂಡ ವಿಧಿಸಿದೆ.
ಬೈಕ್ ವೀಲಿಂಗ್ ಮಾಡುತ್ತಿದ್ದ ಬೈಕ್ ಸವಾರನನ್ನು ಪತ್ತೆ ಹೆಚ್ಚಿದ್ದಾರೆ. ಪಿಎಸ್‌ಐ ತಿರುಮಲೇಶ್ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ದಂಡ ವಿಧಿಸಿದೆ.
ಈ ಮಧ್ಯೆ ವೀಲಿಂಗ್ ಮಾಡುವವರಿಗೆ ಶಿಕ್ಷೆಯಾಗಲಿದೆ ಎಂದು ತೋರಿಸಲು ಸಂಚಾರ ಪೊಲೀಸರು ರೀಲ್ಸ್ ಮಾಡಿದ್ದು ದಂಡ ಪಾವತಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.