ಯುವ ಸಮುದಾಯ ದೇಶದ ಶಕ್ತಿ

17 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಶ್ವದಲ್ಲೇ ಭಾರತ ಯುವ ಶಕ್ತಿ ಹೊಂದಿದ್ದು, ಭಾರತದ ಯುವ ಸಮುದಾಯ ದೇಶದ ಶಕ್ತಿಯಾಗಿದೆ ಎಂದು ಮೃತ್ಯುಂಜಯ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯರಾದ ಡಾ. ನೀಲಕ್ಕಾ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಕಲಾ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ವಾಣಿಜ್ಯ ವಿಭಾಗದ ‘ಸಾರ್ಥಸೃಷ್ಟಿ’ ಕಾಮರ್ಸ್ ಅಸೋಸಿಯೇಷನ್ ಪಠ್ಯೇತರ ಚಟುವಟಿಕೆ ಮತ್ತು ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ದೇಶದ ಭವಿಷ್ಯ ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಯುವ ಶಕ್ತಿ ದೇಶದ ಶಕ್ತಿ. ಜಗತ್ತಿನಲ್ಲಿ ಭಾರತ ಅತೀ ದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಲಿದೆ. ಪ್ರಸ್ತುತ ವಿದ್ಯಾರ್ಥಿಗಳಿಗೆ ಅವಕಾಶಗಳು ಇವೆ. ಕ್ರಿಯಾಶೀಲ ಅಧ್ಯಯನದ ಜತೆಗೆ ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಬಿ.ಕರಡೋಣಿ ಮಾತನಾಡಿ, ಪ್ರಸ್ತುತ ವಾಣಿಜ್ಯ ವಿಷಯದ ವಿದ್ಯಾರ್ಥಿಗಳಿಗೆ ಉದ್ಯಮ ಸೇರಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳಿವೆ. ವಾಣಿಜ್ಯ ವಿಷಯಕ್ಕೆ ಹೆಚ್ಚಿನ ಬೇಡಿಕೆ ಇದೆ. ಸತತ ಓದು ಅಧ್ಯಯನದ ಮೂಲಕ ಸಾಧನೆ ಮಾಡಿ ಎಂದರು.
ಡಾ.ಬಿ.ಬಿ. ಬಿರಾದಾರ, ಡಾ.ಇಂದ್ರಾಯಿಣಿ ಕಟ್ಟಿ ಮಾತನಾಡಿದರು. ಡಾ.ಶಿಲ್ಪಾ ಧಾರವಾಡ, ಪ್ರೊ.ವಿಲಾಸ ದೊಡ್ಡಮನಿ, ಪ್ರೊ. ಸದಾಶಿವ ಅರಕೇರಿ, ಪ್ರೊ.ಸದಾಶಿವ ಮೇಣಸಿಕಾಯಿ, ಪ್ರೊ. ಅಶ್ವಿನಿ ಗಸ್ತಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net