

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಹೊಣಕನಪುರ ಗ್ರಾಮದ ನಿವಾಸಿ ವಿದ್ಯಾಶ್ರೀ ಎಂಬ ಯುವತಿ ಕಾಣೆಯಾಗಿದ್ದು ಇವರ ಪತ್ತೆಗೆ ಸಹಕರಿಸುವಂತೆ ಕೋರಲಾಗಿದೆ. 20 ವರ್ಷದ ವಿದ್ಯಾಶ್ರೀ 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಎಣ್ಣೆಗೆಂಪು ಮೈ ಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಸಿಮೆಂಟ್ ಕಲರ್ ಟಾಪ್ ಹಾಗೂ ನೇರಳೆ ಬಣ್ಣದ ಲೆಗಿನ್ಸ್ ಧರಿಸಿದ್ದರು. ಇವರ ಸುಳಿವು ದೊರೆತಲ್ಲಿ ದೂ.ಸಂ. 08229-222228, 08226-222090 ಸಂಪರ್ಕಿಸುವಂತೆ ಬೇಗೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.