ಸಾಗರೆ ಗ್ರಾಮದ ಯುವತಿ ನಾಪತ್ತೆ

06 SARAG 1 ಅಂಬಿಕಾ
Published on

ಸರಗೂರು: ತಾಲೂಕಿನ ಸಾಗರೆ ಗ್ರಾಮದ ಯುವತಿ ಅಂಬಿಕಾ (26) ಕಾಣೆಯಾಗಿದ್ದಾಳೆ. ಮೈಸೂರಿನ ಚಾಮುಂಡಿ ಬೆಟ್ಟದ ಪಕ್ಕದಲ್ಲಿರುವ ಆರ್ಯವೇದಿಕ್ ಆಸ್ಪತ್ರೆಯಲ್ಲಿ ಸಹಾಯಕಳಾಗಿ ಕೆಲಸ ಮಾಡುತ್ತಿದ್ದು, ಮಾರ್ಚ್ 24ರಂದು ಕೆಲಸಕ್ಕೆ ಹೋಗುತ್ತೇನೆಂದು ಹೋದವಳು ಇಲ್ಲಿಯವರೆವಿಗೂ ಬಂದಿಲ್ಲ. ನಾವು ಅವಳಿಗೆ ಫೋನ್ ಮಾಡಿದರೂ ಸ್ವಿಚ್‌ಆಫ್ ಆಗಿದೆ. ಸಂಬಂಧಿಕರ ಮನೆಯಲ್ಲಿ ವಿಚಾರಿಸಿದರೂ ಪತ್ತೆಯಾಗಿಲ್ಲ ಎಂದು ಯುವತಿಯ ತಂದೆ ಮಹಾದೇವಯ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ದುಂಡು ಮುಖ, 5 ಅಡಿ ಎತ್ತರ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಮಾತನಾಡುತ್ತಿದ್ದು, ಸುಳಿವು ದೊರೆತರೆ ಸರಗೂರು ಪೊಲೀಸ್ ಠಾಣೆ ದೂ. 08228-265542-9480805064ಗೆ ಸಂಪರ್ಕಿಸಲು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net