ಅಽಕಾರಿಗಳಿಲ್ಲ, ಜನಪ್ರತಿನಿಽಗಳೂ ಇಲ್ಲ ಆದರೂ ಉದ್ಘಾಟನೆಯಾಯಿತು ಯೋಗ ಮಂದಿರ!

19 RPT 1(1)
ರಿಪ್ಪನ್‌ಪೇಟೆಯ ಸರ್ಕಾರಿ ಯೋಗ ಮಂದಿರವನ್ನು ಹೋರಾಟಗಾರ ಟಿ.ಆರ್.ಕೃಷ್ಣಮೂರ್ತಿ ಉದ್ಘಾಟಿಸಿದರು.
Published on

ರಿಪ್ಪನ್‌ಪೇಟೆ: ಸರ್ಕಾರದ ಯೋಜನೆಯಂತೆ ಆರೋಗ್ಯ ಇಲಾಖೆಯಿಂದ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿದ್ದ ಯೋಗ ಮಂದಿರವನ್ನು ಹೋರಾಟಗಾರ ಟಿ.ಆರ್.ಕೃಷ್ಣಪ್ಪ ಮಂಗಳವಾರ ಸಂಜೆ ದಿಢೀರ್ ಟೇಪ್ ಕತ್ತರಿಸಿ ಉದ್ಘಾಟಿಸಿ ಅಚ್ಚರಿಮೂಡಿಸಿದರು.

ಮಂದಿರ ಉದ್ಘಾಟಿಸಿ ಕಟ್ಟಡದಲ್ಲಿ ಕೆಲವು ಯೋಗ ಭಂಗಿಗಳನ್ನು ಪ್ರದರ್ಶಿಸಿ ಮಾತನಾಡಿದ ಅವರು ೬ ಲಕ್ಷ ರೂ. ಅನುದಾನದಲ್ಲಿ ನಿರ್ಮಾಣವಾಗಿದ್ದ ಯೋಗ ಮಂದಿರ ಕಾಮಗಾರಿ ಮುಗಿದು ಕೆಲ ತಿಂಗಳಿAದ ಉದ್ಘಾಟನೆಗಾಗಿ ಕಾದಿತ್ತು. ಆದರೆ ಸಾರ್ವಜನಿಕ ಅನುಕೂಲಕ್ಕೆ ಲೋಕಾರ್ಪಣೆಗೊಳಿಸುವಲ್ಲಿ ಅಽಕಾರಿಗಳು ಮತ್ತು ಜನಪ್ರತಿನಿಽಗಳು ಆಸಕ್ತಿ ವಹಿಸದೇ ಬೀಗಹಾಕಿದ ಸ್ಥಿತಿಯಲ್ಲಿಯೇ ಮಂದಿರವಿತ್ತು. ಈ ಬಗ್ಗೆ ಅಽಕಾರಿಗಳ ಗಮನಕ್ಕೆ ತಂದರೂ ಬೀಗ ತೆರೆಯುವಲ್ಲಿ ಮನಸ್ಸು ಮಾಡಿರಲಿಲ್ಲ. ಕೊನೆಗೆ ನಾನೇ ಬಾಗಿಲು ತೆರೆಯುವುದಾಗಿ ಕಟ್ಟಡ ನಿರ್ಮಾಣಗೊಳಿಸಿದ ನಿರ್ಮಿತಿ ಕೇಂದ್ರದ ಅಽಕಾರಿಗಳಿಗೆ ತಿಳಿಸಿದಾಗ ನನ್ನ ಮನವಿಯನ್ನು ಪುರಸ್ಕರಿಸಿ ಸ್ವತಃ ಅಽಕಾರಿಗಳು ಕೀಲಿಕೈ ಕಳುಹಿಸಿಕೊಟ್ಟಿದ್ದರು. ಅದರಂತೆ ಇಂದು ಕಟ್ಟಡ ಉದ್ಘಾಟನೆಗೊಳಿಸಿದ್ದು ಯೋಗಾಸಕ್ತರು ಇದರ ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.
ಜನಪ್ರತಿನಿಽಗಳು ಹಾಗೂ ಅಽಕಾರಿಗಳ ಅನುಪಸ್ಥಿತಿಯಲ್ಲಿ ಶಿಷ್ಟಾಚಾರವಿಲ್ಲದ ಟಿ.ಆರ್.ಕೃಷ್ಣಪ್ಪರಿಂದ ಕಟ್ಟಡದ ಉದ್ಘಾಟನೆ ಕಾರ್ಯಕ್ರಮವು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net