ಜಗತ್ತಿನ ಮೊದಲ ಇಂಜಿನಿಯರ್ ವಿಶ್ವಕರ್ಮ

17Athanigrameen1
Published on

ಅಥಣಿ ಗ್ರಾಮೀಣ: ವಾಸ್ತುಶಿಲ್ಪಿಗಳ ಪ್ರಧಾನದೇವತೆ, ಭೌತಿಕ ಸೃಷ್ಟಿಗೆ ಮೂಲ ಕಾರಣಕರ್ತರಾದ ವಿಶ್ವಕರ್ಮರು ಜಗತ್ತಿನ ಮೊದಲ ಇಂಜಿನಿಯರ್ ಎಂದು ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ ಹೇಳಿದರು.

ಅಥಣಿ ತಾಲೂಕಿನ ಕೊಕಟನೂರಿನಲ್ಲಿ ವಿಶ್ವಕರ್ಮ ಸಮುದಾಯ ಹಾಗೂ ಗ್ರಾಪಂ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ಮಾತನಾಡಿ, ಸ್ಕಂದ ಪುರಾಣದ ಪ್ರಕಾರ ಕಲ್ಲು, ಕಟ್ಟಿಗೆ, ಹಿತ್ತಾಳೆ, ಕಂಚು, ಬೆಳ್ಳಿ, ಬಂಗಾರದ ಕಲೆಗಳಲ್ಲಿ ವಿಶ್ವಕರ್ಮರು ನೈಪುಣ್ಯ ಹೊಂದಿದ್ದರು. ವಿಶ್ವಕರ್ಮರು ದೇವತೆಗಳಿಗಾಗಿ ಅಮರಾವತಿ, ಯಕ್ಷರಿಗಾಗಿ ಅಲಕಾಪುರಿ, ಪಾಂಡವರಿಗಾಗಿ ಮಾಯಾಪುರಿ, ಕೃಷ್ಣನಿಗಾಗಿ ದ್ವಾರಕಾ ನಗರ ನಿರ್ಮಿಸಿದ್ದಾರೆ. ರೈತರಿಗಾಗಿ ನೇಗಿಲು ನಿರ್ಮಿಸಿದ್ದಾರೆ. ವಿಶ್ವಕರ್ಮರ ಜಯಂತಿ ಆಚರಿಸುವುದು ಹೆಮ್ಮೆಯ ವಿಷಯ ಎಂದರು.

ಸಾನ್ನಿಧ್ಯ ವಹಿಸಿದ್ದ ವೇದಮೂರ್ತಿ ಗುರುಮೂರ್ತಯ್ಯ ಕಾಡದೇವರಮಠ ಮಾತನಾಡಿ, ವಿಶ್ವಕರ್ಮರ ವಂಶಜರಾದ ಸೋನಾರ, ಬಡಿಗೇರ, ಕಂಬಾರ, ಪತ್ತಾರ ಸಮುದಾಯದವರು ಕುಶಲಕರ್ಮಿಗಳು. ಇವರಿಲ್ಲದಿದ್ದಲ್ಲಿ ಕಾರ್ಯಗಳು ಸುಗಮವಾಗಿ ಸಾಗುವುದಿಲ್ಲ ಎಂದರು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಮುಖಂಡ ಕಲ್ಲಪ್ಪ ಬಡಿಗೇರ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪಿಕೆಪಿಎಸ್ ನಿರ್ದೇಶಕ ಸುಮಿತ ಪತ್ತಾರ ಧ್ವಜಾರೋಹಣ ನೆರವೇರಿಸಿದರು.

ಜಿಪಂ ಮಾಜಿ ಸದಸ್ಯ ಪ್ರಹ್ಲಾದ ಪೂಜಾರಿ, ಮುಖಂಡರಾದ ವಿಶಾಲ ದೇಸಾಯಿ, ಶಿವಗೌಡ ನೇಮಗೌಡ, ಸುಭಾಷ ಸೋನಕರ, ಸಂತೋಷ ಪತ್ತಾರ, ರಾಜು ಬಡಿಗೇರ, ಕಲ್ಲಪ್ಪ ಪತ್ತಾರ, ಸಂತೋಷ ಬಡಿಗೇರ, ರಾವಸಾಹೇಬ ಹಳಕಿ, ಸಿದ್ದರಾಯ ಬಡಿಗೇರ, ಸಂಜು ಬಡಿಗೇರ, ಭರತೇಶ ರೊಡ್ಡನವರ, ಈಶ್ವರ ಬಡಿಗೇರ, ಶ್ರೀಶೈಲ ಬಡಿಗೇರ, ಗಂಗಾಧರ

ಬಡಿಗೇರ, ಮಲ್ಲಪ್ಪ ಬಡಿಗೇರ, ವಿಠ್ಠಲ ಕುಮಟಗಿ, ಕಾರ್ಯದರ್ಶಿ ಜಯಪಾಲ ದುರ್ಗಣ್ಣವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net