ಪ್ರಪಂಚ ಜ್ಞಾನವೂ ಮುಖ್ಯ

1
ಐಗಳಿ ಪಟ್ಟಣದಲ್ಲಿ ಏರ್ಪಡಿಸಿದ್ದ ಎನ್‌ಎಸ್‌ಎಸ್ ಶಿಬಿರ ಸಮಾರೋಪ ಸಮಾರಂಭದಲ್ಲಿ ಡಾ.ಬಿ.ಐ.ಮಠಪತಿ ಹಾಗೂ ಇತರರನ್ನು ಸತ್ಕರಿಸಲಾಯಿತು. ಡಾ.ರೇವಣಸಿದ್ದಪ್ಪ ಅಮ್ಮಣಿ, ಡಾ.ಹಣಮಂತರಾಯ, ಪ್ರಲ್ಹಾದ ಪಾಟೀಲ, ಜಿ.ಎಸ್.ಬಿರಾದಾರ ಇತರರಿದ್ದರು.
Published on

ಐಗಳಿ: ಪಠ್ಯದಷ್ಟೇ ಹೊರಗಿನ ಪ್ರಪಂಚದ ಜ್ಞಾನವೂ ಮುಖ್ಯವಾಗಿದ್ದು, ಎನ್‌ಎಸ್‌ಎಸ್ ಶಿಬಿರ ಅದಕ್ಕೆ ಪೂರಕ ಎಂದು ಪ್ರಾಧ್ಯಾಪಕ ಡಾ.ಬಿ.ಐ. ಮಠಪತಿ ಹೇಳಿದರು.

ಸ್ಥಳೀಯ ಮಾಣಿಕಪ್ರಭು ದೇವಾಲಯದಲ್ಲಿ ಜರುಗುತ್ತಿರುವ ತೆಲಸಂಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಸೇವಾ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಯೊಬ್ಬರೂ ಸೇವಾ ಮನೋಭಾವ ಬೆಳೆಸಿಕೊಂಡರೆ ಆರೋಗ್ಯದಿಂದ ಬದುಕಲು ಸಾಧ್ಯ ಎಂದರು.

ಸಹಾಯಕ ಪ್ರಾಧ್ಯಾಪಕ ಡಾ.ರೇವಣಸಿದ್ದಪ್ಪ ಅಮ್ಮಣಿ ಮಾತನಾಡಿ, ಶಿಬಿರ ಎಂದರೆ ಬರೀ ಶ್ರಮದಾನವಲ್ಲ. ಇಲ್ಲಿ ನಡೆದ ವಿಷಯಗಳನ್ನು ಅರಿಯುವುದಾಗಿದೆ ಎಂದರು. ಡಾ.ಹಣಮಂತರಾಯ ಪ್ರಾಸ್ತಾವಿಕ ಮಾತನಾಡಿದರು.

ಮಾಣಿಕಪ್ರಭು ಟ್ರಸ್ಟ್ ಕಮಿಟಿ ಅಧ್ಯಕ್ಷ ಪ್ರಲ್ಹಾದ ಪಾಟೀಲ, ನಿರ್ದೇಶಕರಾದ ಜಿ.ಎಸ್.ಬಿರಾದಾರ, ಪ್ರಭು ಬಿರಾದಾರ, ಉಪನ್ಯಾಸಕರಾದ ರೋಹಿಣಿ ಜತ್ತಿ, ಡಾ.ವಿಜಯಲಕ್ಷ್ಮೀ ಪಾಟೀಲ, ಸುವರ್ಣ ಇಂಗಳೇಶ್ವರ, ಡಾ.ರಾಜೇಶ್ವರಿ ಅವಟಿ, ಉಷಾ ಎನ್., ಹಣಮಂತ ಕರಿಗಾರ, ರವೀಂದ್ರ ಹಾಲಳ್ಳಿ, ಶ್ರೀಶೈಲ ಮಿರ್ಜಿ ಇತರರು ಇದ್ದರು. ಕೆ.ಎಸ್.ಬಿಜ್ಜರಗಿ ಸ್ವಾಗತಿಸಿದರು. ಬಿ.ಎ.ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net