ಜಾನಪದದಲ್ಲಿ ವಿಶ್ವವೇ ಅಡಗಿದೆ

11BDVT3
ಬಾಳೇಮಾರನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆಯಲ್ಲಿ ರಾಜೀವ್ ಗಾಂಽ ಶಿಕ್ಷಣ ಬಿಇಡಿ ಕಾಲೇಜಿನ ಪ್ರಾಚಾರ್ಯ ಎಸ್.ಹನುಮಂತಪ್ಪ ಡ್ರಮ್ ಬಾರಿಸಿ ಚಾಲನೆ ನೀಡಿದರು. ಮಂಜುನಾಥ್, ಪ್ರವೀಣ್ ಕುಮಾರ್, ಜಗದೀಶ್ ಇತರರಿದ್ದರು
Published on

ಭದ್ರಾವತಿ: ತಾಲೂಕಿನ ಬಾಳೇಮಾರನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿ.ಆರ್.ಅಂಬೇಡ್ಕರ್ ಜಾನಪದ ಕಲಾ ಸಂಘ, ಅರಳಿಕೊಪ್ಪ ಛಾಯಾ ಸಂಘದ ಸಹಯೋಗದಲ್ಲಿ ವಿಶ್ವ ಜಾನಪದ ದಿನಾಚರಣೆ-2023 ಸಮಾರಂಭವನ್ನು ಆಚರಿಸಲಾಯಿತು.

ನಗರದ ಹಳೇ ಸೀಗೇಬಾಗಿಯ ರಾಜೀವ್ ಗಾಂಽ ಶಿಕ್ಷಣ ಮಹಾವಿದ್ಯಾಲಯ ಬಿಇಡಿ ಕಾಲೇಜಿನ ಪ್ರಾಚಾರ್ಯ ಎಸ್.ಹನುಮಂತಪ್ಪ ಡ್ರಮ್ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜಾನಪದ ಜಗತ್ತೇ ಒಂದು ವಿಸ್ಮಯ. ಯುವ ಜನರು ಜಾನಪದ ಗೀತೆಗಳನ್ನು ಮೈಗೂಡಿಸಿಕೊಂಡರೆ ವಿಶ್ವವನ್ನೇ ಕಾಣಬಹುದೆಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕ ಕೆ.ಎನ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಅರಳಿಕೊಪ್ಪ ಛಾಯಾ ಸಂಘದ ಅಧ್ಯಕ್ಷ ಬಿ.ಪ್ರವೀಣ್‌ಕುಮಾರ್, ಬಿ.ಆರ್.ಅಂಬೇಡ್ಕರ್ ಜಾನಪದ ಕಲಾ ಸಂಘದ ಕಾರ್ಯದರ್ಶಿ ತಮಟೆ ಜಗದೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net