ಕಳೆಗಟ್ಟಿದ ವಿಶ್ವವಿಖ್ಯಾತ ಜೋಗ ಜಲಪಾತ

05kgl02
ವಿಶ್ವ ವಿಖ್ಯಾತ ಜೋಗ ಜಲಪಾತದ ಬುಧವಾರ ಬೆಳಗಿನ ಚಿತ್ರ.
Published on

ಕಾರ್ಗಲ್: ಶರಾವತಿ ಕಣಿವೆಯಲ್ಲಿ ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೀರಿಲ್ಲದೇ ಸಂಪೂರ್ಣವಾಗಿ ಸೊರಗಿದ್ದ ವಿಶ್ವವಿಖ್ಯಾತ ಜೋಗ ಜಲಪಾತವೂ ಇದೀಗ ನಿಧಾನವಾಗಿ ಕಳೆಗಟ್ಟುತ್ತಲಿದೆ.

ಇಲ್ಲಿಯವರೆಗೂ ನಿತ್ಯವೂ ಪ್ರವಾಸಿಗರು ಸಾಕಷ್ಟು ಪ್ರಮಾಣದಲ್ಲಿ ಆಗಮಿಸುತ್ತಿದ್ದರು. ಆದರೆ ಜೋಗ ಜಲಪಾತದಲ್ಲಿ ಕೇವಲ ನೀರಿಲ್ಲದ ಜಲಪಾತವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ ಇದೀಗ ಮುಂಗಾರು ಆರಂಭಗೊAಡಿದ್ದು ಕಳೆದ ೩ ದಿನಗಳಿಂದ ನಿರಂತರವಾಗಿ ಆರ್ದ್ರಾ ಮಳೆ ಸುರಿಯುತ್ತಿದೆ. ಬತ್ತಿಹೋದ ಜೋಗ ಜಲಪಾತಕ್ಕೆ ಜೀವಕಳೆ ದೊರಕಿದೆ. ಜಲಪಾತದ ಸೌಂದರ್ಯದ ಸವಿಯನ್ನು ಸವಿಯುವ ಪ್ರವಾಸಿಗರಿಗೆ ಇನ್ನೂ ನಿತ್ಯವೂ ಹಬ್ಬವೇ.
ನೀರಿನ ಸಂಗ್ರಹದಲ್ಲಿ ಈ ಬಾರಿ ಅತ್ಯಂತ ಕನಿಷ್ಟ ಮಟ್ಟಕ್ಕೆ ಇಳಿದು 1,740 ಅಡಿ ಮಟ್ಟಕ್ಕೆ ತಲುಪಿದ್ದ ಲಿಂಗನಮಕ್ಕಿ ಜಲಾಶಯಕ್ಕೆ ಮುಂಗಾರು ಆರಂಭಗೊAಡ ಕಳೆದ ಒಂದು ವಾರದಿಂದ ಇಲ್ಲಿಯವರೆಗೆ ಮೂರು ಅಡಿ ನೀರು ಬಂದಿದೆ. ಬುಧವಾರ ಮಧ್ಯಾಹ್ನದಹೊತ್ತಿಗೆ 1743.10 ಅಡಿಯನ್ನು ತಲುಪಿದ್ದು ಕಳೆದ 24 ಗಂಟೆಗಳಲ್ಲಿ ಸುಮಾರು ಒಂದು ಅಡಿ ನೀರು ಜಲಾಶಯಕ್ಕೆ ಹರಿದು ಬಂದಿದೆ. ಜಲಾಶಯದ ಒಳಹರಿವು ಸುಮಾರು 10 ಸಾವಿರ ಕ್ಯೂಸೆಕ್ ಸಮೀಪಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net