

ಹಟ್ಟಿಚಿನ್ನದಗಣಿ: ಪಟ್ಟಣದ ಹಳೇ ಬಸ್ ನಿಲ್ದಾಣ, ಕೋಠಾ ಕ್ರಾಸ್, ಬಸವನಗರ ಕ್ರಾಸ್, ಕಾಕಾ ನಗರ ಸೇರಿ ಪಾದಚಾರಿ ಮಾರ್ಗಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿದ್ದ ಕಸದ 9 ಸ್ಟೀಲ್ ತೊಟ್ಟಿಗಳನ್ನು ಕಳ್ಳತನ ಮಾಡಿದ್ದಾರೆ. ಪಪಂನಿಂದ 1 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ 9 ತಿರುಗಿಸಬಹುದಾದ ಸ್ಟೇನ್‌ಲೆಸ್ ಸ್ಟೀಲ್ ಕಸದ ತೊಟ್ಟಿಗಳನ್ನು ಅಳವಡಿಸಲಾಗಿತ್ತು. ಆದರೆ, ಖದೀಮರು ವೆಲ್ಡಿಂಗ್ ಫ್ರೇಮ್‌ಗಳಿಂದ ಕತ್ತರಿಸಿ ಕದ್ದೊಯದ್ದಿದ್ದಾರೆ. ತೊಟ್ಟಿಗಳ ಚೌಕಟ್ಟು ಮಾತ್ರ ಉಳಿದಿದ್ದು, ಸಾರ್ವಜನಿಕರಿಗೆ ಅಪಾಯ ಉಂಟುಮಾಡುತ್ತಿವೆ. ಪಪಂಗೆ ನಷ್ಟ ಹಾಗೂ ಪೌರಕಾರ್ಮಿಕರರ ಕೆಲಸ ಹೆಚ್ಚು ಮಾಡಿದೆ. ಆದರೆ, ಈವರೆಗೆ ಪಪಂ ಅಧಿಕಾರಿಗಳು ಪೊಲೀಸ್ ಠಾಣೆಗೆ ಯಾವುದೇ ದೂರು ದಾಖಲಿಸದಿರುವುದು ಚರ್ಚೆಗೆ ಗ್ರಾಸವಾಗಿದೆ.