

ಹುಬ್ಬಳ್ಳಿ: ಇಲ್ಲಿಯ ವಾರ್ಡ್ ನಂ. 39ರ ರಾಜನಗರ ಉತ್ತರ ಭಾಗದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಮಹೇಶ ಟೆಂಗಿನಕಾಯಿ ಶನಿವಾರ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಟೆಂಗಿನಕಾಯಿ, ಅಶೋಕನಗರ ಮುಖ್ಯ ರಸ್ತೆಯ ಕಾಮಗಾರಿ ಬೇಗ ಪೂರ್ಣಗೊಳ್ಳಲಿದೆ. ರಸ್ತೆಗಳ ಅಭಿವೃದ್ಧಿ, ಒಳ ಚರಂಡಿ, ಉದ್ಯಾನಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿವೆ. ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದರು.
ಇದೇ ವೇಳೆ ಚಾಮುಂಡೇಶ್ವರಿ ನಗರದ ಕೆಲ ನಿವಾಸಿಗಳಿಗೆ ಮನೆಗಳನ್ನು ಹಸ್ತಾಂತರಿಸಿದರು.
ಪಾಲಿಕೆ ಸದಸಯೆ ಸೀಮಾ ಸಿದ್ದು ಮೊಗಲಿಶೆಟ್ಟರ, ವಾರ್ಡ್ ಅಧ್ಯಕ್ಷ ರಘು ಧಾರವಾಡಕರ, ಪ್ರಮುಖರಾದ ಸಿದ್ದು ಮೊಗಲಿಶೆಟ್ಟರ, ರಾಜಾ ದೇಸಾಯಿ, ಪ್ರಕಾಶ ಶೃಂಗೇರಿ, ಸುಮೇರ ಓಸವಾಲ್, ಡಾ. ವಸಂತ ರೇವಣಕರ, ಎಚ್.ಟಿ. ಕಠಾರೆ, ಯು.ಬಿ. ಶೆಟ್ಟಿ ಇತರರು ಇದ್ದರು.