ಗುರುವಿನ ಮಾರ್ಗದರ್ಶನ ಅವಶ್ಯ

25Kakamari1
Published on

ಕಕಮರಿ: ಗುರಿ, ಛಲ, ಗುರುವಿನ ಆಶೀರ್ವಾದ ಇದ್ದರೆ ವಿದ್ಯೆ ಕಲಿತು ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದು ಗುರುದೇವಾಶ್ರಮದ ಆತ್ಮಾರಾಮ ಸ್ವಾಮೀಜಿ ಹೇಳಿದರು.

ಸ್ಥಳೀಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧೯೯೯-೨೦೦೬ ಹಾಗೂ ೨೦೦೬-೨೦೦೯ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಂದ ಈಚೆಗೆ ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಅಕ್ಷರ ಕಲಿಸಿದ ಗುರುಗಳು, ಪಾಲಕರ ಹಾಗೂ ಭೂಮಿಯ ಋಣ ತೀರಿಸುವುದು ಅಸಾಧ್ಯ. ಉಜ್ವಲ ಭವಿಷ್ಯಕ್ಕೆ ಗುರುವಿನ ಮಾರ್ಗದರ್ಶನ ಅತ್ಯವಶ್ಯ ಎಂದರು.

ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು.

ಪ್ರಭುಲಿಂಗ ಸ್ವಾಮೀಜಿ, ಜಿಪಂ ಮಾಜಿ ಸದಸ್ಯ ಗುರಪ್ಪ ದಾಶ್ಯಾಳ, ಮಾಜಿ ತಾಪಂ ಸದಸ್ಯ ಅಪ್ಪಾಸಾಹೇಬ ಈರಗೌಡ, ವೆಂಕನಗೌಡ ಪಾಟೀಲ, ನಿವೃತ್ತ ಮುಖ್ಯಶಿಕ್ಷಕ ವಿ.ಎಸ್.ಶಿರೋಳ, ಕೆ.ಬಿ.ಹುಲೆನ್ನವರ, ವೈ.ಜಿ.ದೀಕ್ಷಿತ, ಎಸ್.ಬಿ.ಬಡವಗೋಳ, ಎ.ಎಸ್.ಗಡಾಲೋಟಿ, ಎಂ.ಎನ್.ವಾಲಿ, ಡಿ.ಆರ್.ಶಿವಪೂರ, ಐ.ಸಿ.ಕೊಕಟನೂರ ಮತ್ತು ಹಳೆಯ ವಿದ್ಯಾರ್ಥಿಗಳು ಇತರರಿದ್ದರು. ಸಿದ್ರಾಮ ತಂಗಡಿ ಸ್ವಾಗತಿಸಿದರು. ಶ್ರೀಧರ ಒಡೆಯರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net