ಯಶಸ್ವೀ ಕಲಾವೃಂದದ ಕಾರ್ಯ ಶ್ಲಾಘನೀಯ

kota
Published on

ವಿಜಯವಾಣಿ ಸುದ್ದಿಜಾಲ ಕೋಟ

ಜಿಲ್ಲೆಯಲ್ಲಿ ಅನಕ್ಷರಸ್ಥರ ಸಂಖ್ಯೆ ವಿರಳವಾಗಿದ್ದು ಎಲ್ಲರೂ ಸಾಕ್ಷರರಾಗಬೇಕೆಂಬ ಗುರಿಯೊಂದಿಗೆ ಇಲಾಖೆ ಕಾರ್ಯಕ್ರಮ ಅನುಷ್ಠಾನ ವಾಡುತ್ತಿದೆ. ಉಡುಪಿ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯನ್ನಾಗಿಸುವ ಪ್ರಯತ್ನದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ, ಉಡುಪಿ ಜಿಪಂ ಸದಾ ಕ್ರಿಯಾಶೀಲವಾಗಿದೆ. ಈ ನಿಟ್ಟಿನಲ್ಲಿ ರಸರಂಗ ಕೋಟ, ಯಶಸ್ವೀ ಕಲಾವೃಂದ ಪ್ರತೀ ವರ್ಷವೂ ಸಹಕಾರಿಯಾಗಿ ಬೆಂಬಲಿಸುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಉಮೇಶ್ ವಾತನಾಡಿದರು.

ತೆಕ್ಕಟ್ಟೆ ಮಹಾಲಿಂಗೇಶ್ವರ ದೇಗುಲದಲ್ಲಿ ಯಶಸ್ವೀ ಕಲಾವೃಂದದ ಸಹಕಾರದಲ್ಲಿ ದೇಗುಲದ ಸೋಣೆ ಆರತಿ ಕಾರ್ಯಕ್ರಮದಲ್ಲಿ ರಸರಂಗ ಕೋಟ ಪ್ರಸ್ತುತಿಯ ಗಾಂಧಾರಿ ಯಕ್ಷಗಾನ ಪ್ರದರ್ಶನಕ್ಕೂ ಮುನ್ನ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಸಾಕ್ಷರತಾ ಸಪ್ತಾಹದಲ್ಲಿ ಸಾಕ್ಷರ ಕಿರಣ ಯಕ್ಷಗಾನ ಪ್ರದರ್ಶನದಲ್ಲಿ ವಾತನಾಡಿದರು.

ಯಶಸ್ವಿ ಕಲಾವೃಂದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ, ಉದ್ಯಮಿ ಗೋಪಿನಾಥ ವೈದ್ಯ, ಪರಿಷತ್ ವಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ವೈದ್ಯ, ಕೃಷಿಕ ವಾದಿರಾಜ ಹತ್ವಾರ್ ಉಪಸ್ಥಿತರಿದ್ದರು. ಹೆರಿಯ ವಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಗಾಂಧಾರಿ ಯಕ್ಷಗಾನ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net