ಶಾಂತಿಸಾಗರ ಸೊಸೈಟಿ ಕಾರ್ಯ ಶ್ಲಾಘನೀಯ

13Kagavad1
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 38;
Published on

ಕಾಗವಾಡ: ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಸ್ಥಾಪನೆಗೊಂಡು ೧೧ ಶಾಖೆಗಳನ್ನು ಹೊಂದಿರುವ ಶ್ರೀ ಶಾಂತಿಸಾಗರ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘ ಆರ್ಥಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಸದಸ್ಯ ಬಿ.ಎ.ಪಾಟೀಲ ಹೇಳಿದರು.

ತಾಲೂಕಿನ ಶಿರಗುಪ್ಪಿ ಗ್ರಾಮದ ಜೈನ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಶಾಂತಿಸಾಗರ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ೨೮ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿ, ದಿ.ಡಾ.ಎನ್.ಡಿ.ಭೋಮಾಜ ಅವರು ಪ್ರಾರಂಭಿಸಿದ ಶಾಂತಿಸಾಗರ ಸೊಸೈಟಿ ಸದಸ್ಯರ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿದೆ ಎಂದರು.

ಸಹಕಾರಿ ನಿರ್ದೇಶಕ ಸಾಗರ ದುಗ್ಗೆ ಮಾತನಾಡಿ, ಶ್ರೀ ಶಾಂತಿಸಾಗರ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದಲ್ಲಿ ಒಟ್ಟು ೨,೮೫೩ ಸದಸ್ಯರಿದ್ದಾರೆ. ೪೬.೬೧ ಕೋಟಿ ರೂ. ಠೇವಣಿ, ೩೪.೯೯ ಕೋಟಿ ರೂ. ಸಾಲ ವಿತರಣೆ ಮಾಡಿ, ಒಟ್ಟು ೪೮.೬೪ ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದರು.

ಸಂಘದ ಉಪಾಧ್ಯಕ್ಷ ಪುರಂದರ ಕನವಾಡೆ, ಚಿಂಚಲಿ ಶಾಖೆಯ ವ್ಯವಸ್ಥಾಪಕ ಅಶೋಕ ಜನಾಜ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಅಜಿತ್‌ಕುಮಾರ ಬಂಡೆ, ಪ್ರಕಾಶ ದಾನೋಳೆ, ಅಪ್ಪ ಭಗಾಟೆ, ಜೆ.ಜೆ.ಪಾಟೀಲ, ಚಂದ್ರಕಾಂತ ಧುಳಾಸಾವಂತ, ನಿರ್ದೇಶಕರಾದ ಡಾ.ಎಂ.ಎನ್.ಭೋಮಾಜ, ಶೀತಲ ಜಕಾತೆ, ಶುಭಂ ಪಾಟೀಲ, ಭಗವಂತ ಡಿಗ್ರಜ, ಸುನೀಲ ಪಾಟೀಲ, ರಾಮು ಯರಂಡೋಲೆ, ವಿದ್ಯಾಸಾಗರ ಚೌಗುಲೆ, ಕಲ್ಲಪ್ಪ ಐತವಾಡೆ, ಪ್ರವೀಣ ಹುಕ್ಕೇರಿ, ಚಂದ್ರಕಾಂತ ಮಸೂಡಗೆ, ದೇವಪ್ಪ ದೊಡ್ಡವಾಡ, ಪ್ರಧಾನ ವ್ಯವಸ್ಥಾಪಕ ಅನಂತಕುಮಾರ ಐನಾಪುರೆ ಸ್ವಾಗತಿಸಿದರು. ಕುಮಾರ ಮಾಲಗಾಂವೆ ನಿರೂಪಿಸಿದರು. ಬಾಳಾಸಾಹೇಬ ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net