ಸಂತರದು ಸಮಾಜ ಒಗ್ಗೂಡಿಸುವ ಕೆಲಸ

18Telasanga1
Published on

ತೆಲಸಂಗ: ಸಂತ ಮಂಡಳಿ ಜಾತಿ, ಭೇದವಿಲ್ಲದೆ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸೈನಿಕ ಅನಿಲ ಚವ್ಹಾಣ ಹೇಳಿದರು.

ಗ್ರಾಮದಲ್ಲಿ ಶ್ರಾವಣ ಮಾಸದ ಸಪ್ತಾಹ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪಾಂಡುರಂಗ ಮಾಲಾಧಾರಿಗಳು ಮಾದರಿ ವ್ಯಕ್ತಿತ್ವದಿಂದ ಸಮಾಜಕ್ಕೆ ಪ್ರೇರಣೆ ನೀಡಿದ್ದಾರೆ. ಕೇವಲ ಭಕ್ತಿಯಲ್ಲದೆ, ಬದುಕು ಸ್ವಚ್ಛವಾಗಿಟ್ಟುಕೊಂಡು ಜೀವನ ಸಾರ್ಥಕಗೊಳಿಸುವುದನ್ನು ತಮ್ಮ ನಡತೆ ಮೂಲಕ ತೋರಿಸಿದ್ದಾರೆ ಎಂದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ದಿಂಡಿ ಪಲ್ಲಕ್ಕಿ ಉತ್ಸವ ನಡೆಯಿತು. ಬಳಿಕ ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ಬಾರೂಡ ಕಾರ್ಯಕ್ರಮ ನಡೆಯಿತು.

ಭಕ್ತರು ವಿವಿಧ ವೇಷ ಧರಿಸಿ ಕಿರು ನಾಟಕ ಪ್ರದರ್ಶಿಸಿದರು. ಆನಂದ ಕುಂಬಾರ, ಶಂಕರ ದಳವಾಯಿ, ಭೀಮಪ್ಪ ಹಡಪದ, ಬಾಳು ನಾಟೀಕಾರ, ಸುಭಾಷ ಮೋರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net