

ಹುನಗುಂದ: ಹಿಂದಿನ ಕಾಲದಿಂದಲೂ ನಾಡಿನ ಮಠಮಾನ್ಯಗಳು ತ್ರಿವಿಧ ದಾಸೋಹ, ಎಲ್ಲರಿಗೂ ಮಾರ್ಗದರ್ಶನ ನೀಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಪಟ್ಟಣದ ಗಚ್ಚಿನಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮುರುೇಂದ್ರ ಶ್ರೀಗಳ 59ನೇ ಪುಣ್ಯಸ್ಮರಣೋತ್ಸವ ಮತ್ತು ಸಾಧಕರ ಸನ್ಮಾನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಠಗಳು ಮತ್ತು ಮಠಾಧೀಶರು ನಮಗೆಲ್ಲ ಆದ್ಯಾತ್ಮಿಕ ಜ್ಞಾನದ ಬುತ್ತಿ ಉಣಬಡಿಸುತ್ತಿದ್ದಾರೆ. ಶ್ರೀಮಠಗಳು ಇಂತಹ ಪ್ರವಚನ ಹಮ್ಮಿಕೊಳ್ಳುವ ಮೂಲಕ ನಮ್ಮ ಬದುಕಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.
ಕಮತಗಿಯ ಹೊಳೆ ಹುಚ್ಚೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಆದ್ಯಾತ್ಮಿಕದ ಮೇರು ಪರ್ವತವೇ ಹುನಗುಂದದ ಗಚ್ಚಿನಮಠವಾಗಿದೆ. ಈ ಮಠಕ್ಕೆ ಒಬ್ಬರು ಸಮರ್ಥ ಸ್ವಾಮೀಜಿ ಬೇಕಿತ್ತು. ಸದ್ಯ ಸಿಕ್ಕಿದರೆ ಅವರೇ ಅಮರೇಶ್ವರ ದೇವರು ಎಂದರು.
ಗಚ್ಚಿನಮಠದ ಅಮರೇಶ್ವರ ದೇವರು ಮಾತನಾಡಿ, ಪ್ರತಿಯೊಬ್ಬರೂ ಪ್ರವಚನ ಕೇಳಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.
ವಿಮವಿವ ಸಂಘದ ಗೌರವ ಕಾರ್ಯದರ್ಶಿ ಮಹಾಂತೇಶ ಕಡಪಟ್ಟಿ ಮಾತನಾಡಿದರು.
ಪ್ರವಚನಕಾರ ಗಣೇಶ ಶಾಸಿಗಳು, ಕೊಂಡಗೂಳಿಯ ಹಿರೇಮಠದ ಪ್ರಶಾಂತ ದೇವರು, ಮಾಂತಯ್ಯ ಗಚ್ಚಿನಮಠ, ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಶಿವಪ್ಪ ಯಡಹಳ್ಳಿ, ಮಲ್ಲಣ್ಣ ಲೆಕ್ಕಿಹಾಳ ಇತರರಿದ್ದರು.