ಜೈನ ಸಮುದಾಯದ ಕಾರ್ಯ ಶ್ಲಾಘನೀಯ

30NLT1
ನಾಲತವಾಡ ಪಟ್ಟಣದ ಜೈನ ಸಮುದಾಯದ ಕುಶಾಲಕುಮಾರ ಓಸ್ವಾಲ ಅವರ ಸನ್ಯಾಸತ್ವ ದಿಕ್ಷೆ ಕಾರ್ಯಕ್ರಮದ ಮೆರವಣಿಗೆ ನಡೆಯಿತು. ಮಾಜಿ ಸಚಿವ ಸಿ.ಎಸ್.ನಾಡಗೌಡ ಪೃಥ್ವಿರಾಜ ನಾಡಗೌಡ, ಶಂಕರರಾವ್ ದೇಶಮುಖ, ಗುರುಪ್ರಸಾದ ದೇಶಮುಖ ಇತರರಿದ್ದರು.
Published on

ನಾಲತವಾಡ: ಧಾರ್ಮಿಕ ನೆಲೆಗಟ್ಟಿನ ಮೇಲೆ ಬದುಕು ಕಟ್ಟಿಕೊಂಡು ಹೆತ್ತ ಮಕ್ಕಳನ್ನು ತಮ್ಮ ಧರ್ಮದ ಪ್ರಚಾರಕ್ಕೆ ಅನುವು ಮಾಡಿಕೊಡುವ ಜೈನ ಸಮುದಾಯದ ಕಾರ್ಯ ಶ್ಲಾಘನೀಯ ಎಂದು ಮಾಜಿ ಸಚಿವ ಸಿ.ಎಸ್.ನಾಡಗೌಡ ಹೇಳಿದರು.

ಪಟ್ಟಣದ ದಿನೇಶ ಓಸ್ವಾಲ ಅವರ ಪುತ್ರ ಕುಶಾಲಕುಮಾರ ಅವರ ಸನ್ಯಾಸ ದಿಕ್ಷೆಯ ನಿಮಿತ್ತ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜಸ್ಥಾನದ ನಾಕೂಡಾಜಿ ಜೈನ್ ತೀರ್ಥ ಸ್ಥಾನದಲ್ಲಿ ನ.19 ರಂದು ಲೋಕ ಕಲ್ಯಾಣಕ್ಕಾಗಿ ಸನ್ಯಾಸತ್ವ ಸ್ವೀಕರಿಸುತ್ತಿರುವುದು ನಿಜಕ್ಕೂ ಧರ್ಮದ ಅದ್ಭುತ ಕಾರ್ಯ ಎಂದರು.

ಈ ವೇಳೆ ಸನ್ಯಾಸತ್ವ ಸ್ವೀಕರಿಸಲಿರುವ ಕುಶಾಲಕುಮಾರ ಮಾತನಾಡಿದರು. ಪಪಂ ಸದಸ್ಯರಾದ ಪೃಥ್ವಿರಾಜ ನಾಡಗೌಡ, ಶಂಕರರಾವ್ ದೇಶಮುಖ, ಗುರುಪ್ರಸಾದ ದೇಶಮುಖ, ಅಮರ ದೇಶಮುಖ, ಎಂ.ಎಸ್.ಪಾಟೀಲ, ಶಿವಪ್ಪಗೌಡ ತಾತರಡ್ಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net