ಸದ್ವಿಚಾರಗಳನ್ನು ಪಸರಿಸುವ ಕಾರ್ಯ ನಿರಂತರ: ಶಾಸಕ ಬಿ.ವೈ.ವಿಜಯೇಂದ್ರ

3 ಎಸ್ಜೆಪಿ 4b
ವೀರಶೈವ ಜಂಗಮ ಅರ್ಚಕ, ಪುರೋಹಿತರ ಸಂಘವನ್ನು ಶಾಸಕ ಬಿ.ವೈ. ವಿಜಯೇಂದ್ರ ಉದ್ಘಾಟಿಸಿದರು. ಪ್ರಭುಸ್ವಾಮಿ, ಪುಟ್ಟಯ್ಯ ಶಾಸ್ತಿç, ಪುಟ್ಟಸ್ವಾಮಿ, ಶಿವಕುಮಾರ್ ಶಾಸ್ತಿç, ಶಿವಯ್ಯ ಶಾಸ್ತಿç, ಸದಾಶಿವ ಶಾಸ್ತಿç, ಎನ್.ವಿ.ಈರೇಶ್ ಇತರರಿದ್ದರು.
Published on

ಶಿಕಾರಿಪುರ: ಜಂಗಮರು ಪೂಜೆ ಪುನಸ್ಕಾರ ಮಾಡುತ್ತ ಈ ಮಣ್ಣಿನ ಸಂಸ್ಕೃತಿ, ಸಂಪ್ರದಾಯ, ಆಚರಣೆ ಪರಂಪರೆಗಳನ್ನು ಉಳಿಸಿ ಬೆಳೆಸುತ್ತಿz್ದÁರೆ.ದೈವೀ ಕಾರ್ಯಗಳಿಂದ ಸಮಾಜ ಉನ್ನತಿಯತ್ತ ಸಾಗುವಂತೆ ಮಾಡುತ್ತಿದ್ದಾರೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಭಾನುವಾರ ವಿರಕ್ತಮಠದಲ್ಲಿ ಆಯೋಜಿಸಿದ್ದ ವೀರಶೈವ ಜಂಗಮ ಪುರೋಹಿತ, ಅರ್ಚಕರ ಸಂಘ ಉದ್ಘಾಟಿಸಿ ಮಾತನಾಡಿ, ನಾಡಿನಾದ್ಯಂತ ಇರುವ ಬಹುತೇಕ ವೀರಶೈವ ಮಠಗಳಿಗೆ ಮಠಾಽಪತಿಗಳನ್ನು ಕೊಡುಗೆಯಾಗಿ ನೀಡಿದ್ದು ಜಂಗಮ ಸಮಾಜ. ತಮ್ಮನ್ನು ಸಮರ್ಪಿಸಿಕೊಂಡು ಧರ್ಮ ಸಂದೇಶ ಸಾರುವ ಶ್ರೇಷ್ಠ ಕಾಯಕ ಮಾಡುತ್ತಿರುವ ಗುರು ಸಮೂಹವಿದು ಎಂದರು.
ವೀರಶೈವ ಸಮಾಜದಲ್ಲಿ ಅತ್ಯಂತ ವಿಶಾಲವಾದ ಚಿಂತನೆಗಳಿದ್ದು ಮಾನವ ಧರ್ಮಕ್ಕೆ ಆದ್ಯತೆ ನೀಡಿ ಕಾಯಕ ದಾಸೋಹ ಸಹಬಾಳ್ವೆ ಸಾರಿದ ಸಹೃದಯಿ ಸಮಾಜ. ವೀರಶೈವ ಮಠಗಳು ಇಂದಿಗೂ ಶ್ರೇಷ್ಠ ಮಟ್ಟದಲ್ಲಿ e್ಞÁನದಾಸೋಹ ಮಾಡುತ್ತಿವೆ. ತಮ್ಮ ಜೋಳಿಗೆ ಮೂಲಕ ಸದ್ವಚಾರಗಳನ್ನು ಜಗತ್ತಿಗೇ ಹಂಚುತ್ತಿದ್ದಾರೆ. ಪೂಜೆ-ಪುನಸ್ಕಾರ, ವೇದ ಮಂತ್ರಗಳ ಜತೆಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಜಂಗಮ ಸಮಾಜ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಇನ್ನಷ್ಟು ಹಿಂದುಳಿದಿದೆ. ಇಂತಹ ಸಂಘಗಳಿAದ ಸಮಾಜ ಇನ್ನಷ್ಟು ಬಲಿಷ್ಠಗೊಳ್ಳಬೇಕು. ಅರ್ಚಕರು, ಪುರೋಹಿತರೂ ಆರ್ಥಿಕವಾಗಿ ಹಿಂದುಳಿದ್ದು ಅವರು ಮುನ್ನೆಲೆಗೆ ಬರಬೇಕು ಎಂದು ಹೇಳಿದರು.
ಪುಟ್ಟಯ್ಯ ಶಾಸ್ತಿç ಅಧ್ಯಕ್ಷತೆ ವಹಿಸಿದ್ದರು. ಜಂಗಮ ಸಮಾಜದ ಅಧ್ಯಕ್ಷ ವೇ. ಪುಟ್ಟಸ್ವಾಮಿ, ವೀರಶೈವ ಜಂಗಮ ಅರ್ಚಕ ಪುರೋಹಿತರ ಸಂಘದ ಅಧ್ಯಕ ಪ್ರಭು ಸ್ವಾಮಿ ಶಾಸಿö ಸಾಲೂರು. ಉಪಾಧ್ಯಕ್ಷ ಶಿವಕುಮಾರ್ ಶಾಸ್ತಿç ಕವಲಿ ಕಾರ್ಯದರ್ಶಿ ಸದಾಶಿವ ಶಾಸಿö, ಕಾಳೇನಹಳ್ಳಿ, ಶಿವಯ್ಯ ಶಾಸಿö ಅಧ್ಯಕ್ಷ ಜಯಕರ್ನಾಟಕ ಜನಪರ ವೇದಿಕೆ ಮತ್ತು ಅಖಿಲಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎನ್.ವಿ. ಈರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net