

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಚೇರ್ಕಾಡಿ ವಲಯದ ಶೌರ್ಯ ಘಟಕದವರ ಕಾರ್ಯ ಶ್ಲಾಘನೀಯ ಎಂದು ಉಡುಪಿ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಹರೀಶ್ ಶೆಟ್ಟಿ ಚೇರ್ಕಾಡಿ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ 57ನೇ ವರ್ಷದ ಪಟ್ಟಾಭಿಷೇಕ ಪ್ರಯುಕ್ತ ಚೇರ್ಕಾಡಿ ವಲಯ ಶೌರ್ಯ ವಿಪತ್ತು ತಂಡದವರಿಂದ ಉಪ್ಪೂರು ಸಮೀಪದ ಕೊಳಲಗಿರಿಯ ಸ್ಪಂದನದಲ್ಲಿ ಒಂದು ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೂಜ್ಯ ಖಾವಂದರ ಪರಿಕಲ್ಪನೆಯಲ್ಲಿ ಶೌರ್ಯ ವಿಪತ್ತು ತಂಡ ಎಂದು ಹುಟ್ಟು ಹಾಕಿ ಅವರಿಗೆ ಬೇಕಾದ ಸವಲತ್ತು, ತರಬೇತಿ ಒದಗಿಸಿ, ಮಾಡಬೇಕಾದ ಕೆಲಸಗಳ ಪಟ್ಟಿ ನೀಡಿ ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ವಿಪತ್ತು ನಿರ್ವಹಣೆ ಮಾಡುವ ಗುರಿಯಿಂದ ಆರಂಭಿಸಲಾಯಿತು. ಕಳೆದ ಮಳೆಗಾಲದಲ್ಲಿ ಬಂದಿರುವ ವಿಪತ್ತುಗಳನ್ನು ಶೌರ್ಯ ತಂಡದವರು ಕ್ಲಪ್ತ ಸಮಯದಲ್ಲಿ ನೆರವಾಗುವುದರ ಮೂಲಕ ಮಾದರಿಯಾಗಿದ್ದಾರೆ ಎಂದರು.
ಸಂಸ್ಥೆ ಸಂಸ್ಥಾಪಕ ಜನಾರ್ದನ, ಚೇರ್ಕಾಡಿ ವಲಯಾಧ್ಯಕ್ಷ ಹರೀಶ್ ನಾಯ್ಕ, ಚೇರ್ಕಾಡಿ ವಲಯ ಮೇಲ್ವಿಚಾರಕಿ ಆಶಾಲತಾ, ಶೌರ್ಯ ಘಟಕ ಅಧ್ಯಕ್ಷ ಸತೀಶ್ ನಾಯ್ಕ, ಚೇರ್ಕಾಡಿ ವಲಯ ಸೇವಾ ಪ್ರತಿನಿಧಿಗಳು, ವಲಯದ ವಿಎಲ್‌ಇ, ಶೌರ್ಯ ತಂಡದ ಸದಸ್ಯರು, ಚೇರ್ಕಾಡಿ ಒಕ್ಕೂಟ ಅಧ್ಯಕ್ಷೆ ವಿನೋದಾ ಉಪಸ್ಥಿತರಿದ್ದರು. ಚೇರ್ಕಾಡಿ ವಲಯದ ಮೇಲ್ವಿಚಾರಕಿ ಆಶಾಲತಾ ಕಾರ್ಯಕ್ರಮ ನಿರೂಪಿಸಿದರು. ಹಲುವಳ್ಳಿ ಸೇವಾಪ್ರತಿನಿಧಿ ಶಶಿಕಲಾ ವಂದಿಸಿದರು.
ಮುಗ್ಧ ಮನಸಿನ ಮಕ್ಕಳೊಂದಿಗೆ ಬೆರೆಯುವುದರಿಂದ ಮನಸ್ಸು ಪ್ರಫುಲ್ಲವಾಗುತ್ತದೆ. ದೇವಸ್ಥಾನಕ್ಕೆ ಹೋಗಿ ದೇವರಿಗೆ ಪ್ರಾರ್ಥಿಸಬೇಕಿಲ್ಲ. ಇಂತಹ ಮಕ್ಕಳಿಗೆ ಸಹಾಯ ಮಾಡಿದರೆ ಅಲ್ಲಿಯೇ ದೇವರನ್ನು ಕಾಣಬಹುದು. -ಹರೀಶ್ ನಾಯ್ಕ ಶೌರ್ಯ ಘಟಕ ಚೇರ್ಕಾಡಿ ವಲಯ ಅಧ್ಯಕ್ಷ https://www.vijayavani.net/doctorate-degree-to-puneeth-rp https://www.vijayavani.net/kps-students-selected-for-state-level