

ಕೋಟ: ಯುವಜನತೆ ಕಲೆ ಸಾಹಿತ್ಯದತ್ತ ಆಸಕ್ತಿ ವಹಿಸಬೇಕು. ಮಕ್ಕಳಲ್ಲಿ ಬಿತ್ತಿದ ಸಾಹಿತ್ಯದ ಬೀಜ ಮುಂದೆ ಅಕ್ಷರ ಬೆಳೆಯಾಗಿ ಬೆಳೆಯಲಿದೆ. ಸಾಲಿಗ್ರಾಮ ಮಕ್ಕಳ ಮೇಳವು ಮಕ್ಕಳಿಗೆ ವೇದಿಕೆ ಒದಗಿಸುತ್ತಿವುದು ಶ್ಲಾಘನಾರ್ಹ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು.
ಕೋಟ ಪಟೇಲರ ಮನೆಯಲ್ಲಿ ಇತ್ತೀಚೆಗೆ ಆಯೋಜಿಸಿದ ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣ ಪರ್ವ-6ರ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣೆ, ಹಂದೆ ಉಡುಪ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ರಂಗ ನಿರ್ದೇಶಕ ಡಾ.ಶ್ರೀಪಾದ ಭಟ್ ಅವರಿಗೆ ಎಚ್.ಶ್ರೀಧರ ಹಂದೆ ಹೆಸರಿನ ಪ್ರಶಸ್ತಿ ಪ್ರದಾನಿಸಲಾಯಿತು.
ಮಕ್ಕಳ ಮೇಳ ಅಧ್ಯಕ್ಷ ಬಲರಾಮ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಯಕ್ಷ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ, ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ ಕಲ್ಕೂರ, ಪ್ರಮುಖರಾದ ಗಣೇಶ್ ಕಿಣಿ, ಇಬ್ರಾಹಿಂ ಸಾಹೇಬ್, ಆನಂದ ಸಿ. ಕುಂದರ್, ಎಂ.ರಾಮದೇವ ಐತಾಳ, ಶಂಕರನಾರಾಯಣ ಹೆಬ್ಬಾರ್, ಮಹೇಶ ಉಡುಪ, ಎಚ್.ಶ್ರೀಧರ ಹಂದೆ, ಜನಾರ್ದನ ಹಂದೆ, ವಿನಿತಾ ಸಹಿತ ಗಣ್ಯರು ಉಪಸ್ಥಿತರಿದ್ದರು. ಸುಜಯಿಂದ್ರ ಹಂದೆ ಸ್ವಾಗತಿಸಿದರು. ಪೂರ್ಣಿಮಾ ವಂದಿಸಿದರು. ಕಾವ್ಯ ನಿರೂಪಿಸಿದರು. ಅಭಿಲಾಷ ಸಹಕರಿಸಿದರು. ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಇಲ್ಲಿನ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.