ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಕಾರ್ಯ ಪ್ರಶಂಸನೀಯ

pannalal bansali
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ರಾಷ್ಟ್ರೀಯ ಸೇವಾಭಾರತಿ ಟ್ರಸ್ಟ್ ಅಧ್ಯಕ್ಷ ಪನ್ನಾಲಾಲ ಬನ್ಸಾಲಿ ಅವರು ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಕೇಂದ್ರಕ್ಕೆ ಭೇಟಿ ನೀಡಿದ್ದ ಅವರು ರಾಷ್ಟ್ರೋತ್ಥಾನವು ಹಲವಾರು ಜನರ ಜೀವ ಉಳಿಸುವ ಮಹತ್ಕಾರ್ಯ ಕೈಗೊಂಡಿದೆ ಹಾಗೂ ಅನೇಕ ರೋಗಿಗಳಿಗೆ ರಕ್ತ ನೀಡುವುದರ ಮೂಲಕ ಹೆಸರುವಾಸಿಯಾಗಿದೆ ಎಂದು ಹೇಳಿದರು. ಕೇಂದ್ರದ ಟ್ರಸ್ಟಿ ದತ್ತಮೂರ್ತಿ ಕುಲಕರ್ಣಿ, ವೈದ್ಯಾಧಿಕಾರಿ ಡಾ.ಎಸ್.ಎಸ್. ಸಂಗೊಳ್ಳಿ ಹಾಗೂ ವಿನೋದಕುಮಾರ ಪಟವಾ ಅವರ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಕ್ತದಾನ ಪ್ರಕ್ರಿಯೆ, ಕೇಂದ್ರದಲ್ಲಿನ ಯಂತ್ರ ಮತ್ತು ತಂತ್ರಜ್ಞಾನದ ಬಳಕೆ, ಪೂರ್ಣ ರಕ್ತ, ಪ್ಲೇಟ್​ಲೆಟ್, ಪ್ಲಾಸ್ಮಾ, ಪಿಆರ್​ಬಿಸಿ ಇತ್ಯಾದಿಗಳ ಬಗ್ಗೆ ಬನ್ಸಾಲಿ ಅವರಿಗೆ ವಿವರಿಸಲಾಯಿತು. ಪನ್ನಾಲಾಲ ಬನ್ಸಾಲಿ ಅವರನ್ನು ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.

ಕೇಂದ್ರದ ಟ್ರಸ್ಟಿಗಳಾದ ನರಸಿಂಹ ಕುಲಕರ್ಣಿ, ಶಂಕರ ಗುಮಾಸ್ತೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net