

ಚಿಕ್ಕೋಡಿ: ಮೊಬೈಲ್ ಭರಾಟೆ ಮದ್ಯೆ ಛಾಯಾಗ್ರಾಹಕರ ಜೀವನ ಕಷ್ಟಕರವಾಗಿದೆ. ಸಂಯಮದಿಂದ ಉತ್ತಮ ಚಿತ್ರ ಸೆರೆಹಿಡಿಯುವ ಛಾಯಾಗ್ರಾಹಕರ ಕಾರ್ಯ ಎಲ್ಲರಿಗೂ ಮಾದರಿ ಎಂದು ಪುರಸಭೆ ಅಧ್ಯಕ್ಷೆ ವೀಣಾ ಕವಟಗಿಮಠ ಹೇಳಿದರು.
ತಾಲೂಕಿನ ಲೋಕೋಪಯೋಗಿ ಇಲಾಖೆ ಸಭಾಭವನದಲ್ಲಿ ತಾಲೂಕು ಛಾಯಾಗ್ರಾಹಕ ಸಂಘದ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆಯಲ್ಲಿ ಮಾತನಾಡಿ, ಛಾಯಾಗ್ರಾಹಕರು ಶ್ರದ್ಧಾ, ಭಕ್ತಿಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಕೊಲ್ಲಾಪುರದ ಗಂಬರ ಕೋಳೆಕರ ಸಿನೆಮಾಟೋಗ್ರಾಫಿ ಮತ್ತು ವೀಡಿಯೊ ಎಡಿಟಿಂಗ್ ಬೆಸಿಕ್ ಪ್ರಿಮಿಯರ್ ಪ್ರೊ. ತರಬೇತಿ ನೀಡಿದರು.
ಕರ್ನಾಟಕ ಛಾಯಾಗ್ರಾಹಕರ ಸಂಘದ ನಿರ್ದೇಶಕ ಮಲ್ಲಿಕಾರ್ಜುನ ಕೆ.ಆರ್., ಚಿಂಚಣಿ ಸಿದ್ಧಸಂಸ್ಥಾನ ಮಠದ ಉತ್ತರಾಧಿಕಾರಿ ಶಿವಪ್ರಸಾದ ದೇವರು, ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಮಾತನಾಡಿದರು. ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಶಂಕರ ಮಾನಗಾವಿ, ಅನಿಲ ಮಾನೆ, ಬಸವರಾಜ ರಾಮನ್ನವರ, ಸುರೇಶ ರಜಪೂತ, ಶಂಕರ ಮಾನಗಾಂವಿ, ರಾಮಪ್ಪ ಹಾಲಟ್ಟಿ , ಮಾಚಿದೇವ ಬೋಸಲೆ, ಕಲ್ಲಪ್ಪ ಬಡಿಗೇರ, ಸುರೇಶ ಕೆಂಚಗೌಡ, ಸುನೀಲ ಪಾಟೀಲ, ಮಹಾದೇವ ಪಾಟೀಲ, ಗಣಪತಿ ಹಿರೇಮಠ, ಸಾಗರ ಕಟ್ಟಿಕರ, ಅದೃಶ್ಯ ಮಗದುಮ್ಮ, ರಾಜು ದೋಂಗಡಿ, ರಾಜು ಸಂಕಪಾಳ ಇತರರಿದ್ದರು.